ETV Bharat / city

ವಾಯುವ್ಯ ಕರ್ನಾಟಕ ಸಾರಿಗೆಯಿಂದ ಕಾರ್ಗೋ ಸೇವೆ ಆರಂಭ - Service from North West Karnataka Transport

ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳು ಮತ್ತು ಪ್ರಮುಖ ತಾಲೂಕು ಕೇಂದ್ರಗಳೂ ಸೇರಿದಂತೆ ವಾ.ಕ.ರ.ಸಾ.ಸಂಸ್ಥೆಯ 26 ಸ್ಥಳಗಳಿಗೆ, ಕ.ರಾ.ರ.ಸಾ ನಿಗಮದ ವ್ಯಾಪ್ತಿಯ 35, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 27 ಮತ್ತು ಅಂತರರಾಜ್ಯಗಳಲ್ಲಿ 21 ಸ್ಥಳಗಳೂ ಸೇರಿದಂತೆ ಒಟ್ಟು 109 ಪ್ರಮುಖ ಸ್ಥಳಗಳಿಗೆ ಕಾರ್ಗೋ ಸೇವೆ ಆರಂಭಿಸಲಾಗಿದೆ.

ಕಾರ್ಗೋ ಸೇವೆ
ಕಾರ್ಗೋ ಸೇವೆ
author img

By

Published : Mar 9, 2021, 7:18 PM IST

ಹುಬ್ಬಳ್ಳಿ: ಸಾರಿಗೆ ಬಸ್​ಗಳಲ್ಲಿ ಮಿತವ್ಯಯಕರ ದರದಲ್ಲಿ ಶೀಘ್ರ, ಸುರಕ್ಷಿತ ಹಾಗೂ ಪಾರದರ್ಶಕ ಸರಕು ಸಾಗಾಣಿಕೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಹಕಸ್ನೇಹಿ ತಂತ್ರಾಂಶ ಆಧಾರಿತ ನಿರ್ವಹಣಾ ವ್ಯವಸ್ಥೆಯೊಂದಿಗೆ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಕಾರ್ಗೋ ಸೇವೆ ಆರಂಭಿಸಲಾಗಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣ ಮತ್ತು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ವಿಶೇಷ ಕಾರ್ಗೋ ಕೇಂದ್ರಗಳನ್ನು ತೆರೆಯಲಾಗಿದೆ. ಈ ಸೇವೆಯನ್ನು ಸಂಪೂರ್ಣವಾಗಿ ತಂತ್ರಾಂಶ ಆಧಾರಿತವಾಗಿ ನಿರ್ವಹಿಸಲಾಗುತ್ತದೆ. ಗ್ರಾಹಕರು ಆರಂಭಿಕ ಸ್ಥಳದಲ್ಲಿ ರವಾನೆಗಾಗಿ ನೀಡುವ ಸರಕನ್ನು ಸ್ವೀಕರಿಸಿದ ತಕ್ಷಣ ಕಳುಹಿಸುವವರ ಮೊಬೈಲ್ ದೂರವಾಣಿಗೆ ಎಸ್ಎಂಎಸ್ ಸಂದೇಶ ಬರುತ್ತದೆ. ಅದರ ಆಧಾರದಲ್ಲಿ ಗ್ರಾಹಕರು ವಿಳಾಸದಾರರಿಗೆ ವಿತರಣೆಯಾಗುವವರೆಗೆ ತಮ್ಮ ಪಾರ್ಸೆಲ್ ಮತ್ತು ಕೊರಿಯರ್​ಗಳ ಸಾಗಾಣಿಕೆಯ ಪ್ರತಿ ಹಂತವನ್ನು ತಿಳಿದುಕೊಳ್ಳಬಹುದಾಗಿದೆ. ದೂರು ಮತ್ತು ಸಲಹೆಗಳಿಗಾಗಿ ಟೋಲ್ ಫ್ರೀ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ.

ಕಾರ್ಗೋ ಸೇವೆ ಕುರಿತು ಮಾತನಾಡಿದ ಸಾರಿಗೆ ಅಧಿಕಾರಿಗಳು

ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳು ಮತ್ತು ಪ್ರಮುಖ ತಾಲೂಕು ಕೇಂದ್ರಗಳೂ ಸೇರಿದಂತೆ ವಾ.ಕ.ರ.ಸಾ.ಸಂಸ್ಥೆಯ 26 ಸ್ಥಳಗಳಿಗೆ, ಕ.ರಾ.ರ.ಸಾ ನಿಗಮದ ವ್ಯಾಪ್ತಿಯ 35, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 27 ಮತ್ತು ಅಂತರರಾಜ್ಯಗಳಲ್ಲಿ 21 ಸ್ಥಳಗಳೂ ಸೇರಿದಂತೆ ಒಟ್ಟು 109 ಪ್ರಮುಖ ಸ್ಥಳಗಳಿಗೆ ಕಾರ್ಗೋ ಸೇವೆ ಆರಂಭಿಸಲಾಗಿದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಥಳಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದ್ದು, ಈ ಸೇವೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ.

ನೂತನ ವ್ಯವಸ್ಥೆಯಲ್ಲಿ ಸಾಗಾಣಿಕೆ ಮಾಡಬಹುದಾದ ಸರಕುಗಳನ್ನು ಕೋರಿಯರ್ ಸರಕುಗಳು, ಸಾಮಾನ್ಯ ಸರಕುಗಳು ಮತ್ತು ಹಾಳಾಗುವ ಸರಕುಗಳು(ಪೆರಿಶೇಬಲ್ ಲಗೇಜ್) ಎಂದು ಮೂರು ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ. ಮೂರೂ ಪ್ರಕಾರದ ಸರಕುಗಳಿಗೆ ಪ್ರತ್ಯೇಕ ದರಪಟ್ಟಿ ನಿಗದಿಪಡಿಸಲಾಗಿದ್ದು, ಗ್ರಾಹಕರು ತಮ್ಮ ಬೆಲೆಬಾಳುವ ಸರಕುಗಳಿಗೆ ವಿಮೆ ಮಾಡಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಹೋಬಳಿ ‌ಮಟ್ಟದಲ್ಲಿಯೂ ಸೇವೆ ನೀಡಲು ಸಂಸ್ಥೆ ಚಿಂತನೆ ನಡೆಸಿದೆ.

ಇದನ್ನೂ ಓದಿ: ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ರಾಕಿ ಬಾಯ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.