ETV Bharat / city

ಗ್ರಾಮದಲ್ಲಿಲ್ಲ ಸ್ಮಶಾನ: ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಜಮೀನು ಮಾಲೀಕರು - ಧಾರವಾಡ

ಬ್ಯಾಲ್ಯಾಳ ಗ್ರಾಮದ ಯಲ್ಲಮ್ಮ ಮಂಟೂರು ನಿಧನ ಹೊಂದಿದ್ದು ಅವರ ಮೃತದೇಹದ ಅಂತ್ಯಕ್ರಿಯೆಗೆ ಅದೇ ಗ್ರಾಮದ ಕಲ್ಲಯ್ಯಾ ಮತ್ತು ಕಲ್ಲಪ್ಪ ತಳವಾರ ಅಡ್ಡಿಪಡಿಸುತ್ತಿದ್ದಾರೆ.

Land owners who have obstructed the funeral
ಗ್ರಾಮದಲ್ಲಿಲ್ಲಾ ಸ್ಮಶಾನ: ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಜಮೀನು ಮಾಲೀಕರು
author img

By

Published : Apr 24, 2022, 9:43 PM IST

ಧಾರವಾಡ: ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಪರದಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ನಡೆಯಿತು. ಇಂದು ಬೆಳಿಗ್ಗೆ ಗ್ರಾಮದ ಯಲ್ಲಮ್ಮ ಮಂಟೂರು(85) ಎಂಬುವರು ನಿಧನವಾಗಿದ್ದು ಮೃತದೇಹದ ಅಂತ್ಯಕ್ರಿಯೆಗೆ ಕೆಲವರು ಅಡ್ಡಿಪಡಿಸಿದ್ದಾರೆ.

ಅದೇ ಗ್ರಾಮದ ಕಲ್ಲಯ್ಯಾ ಮತ್ತು ಕಲ್ಲಪ್ಪ ತಳವಾರ ಎಂಬುವವರು ಮೃತದೇಹದ ಅಂತ್ಯಕ್ರಿಯೆಗೆ ಅಡ್ಡಿ ಪಡಿಸಿದ್ದರು. ಈ ಇಬ್ಬರು ನಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ‌ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಹಶೀಲ್ದಾರ್ ಎಂ.ಜಿ.ಹೊರ್ಕಿನಿ ಜಮೀನು ಮಾಲೀಕರ ಮನವೊಲಿಸಲು ಪ್ರಯತ್ನಿಸಿದರೂ ಒಪ್ಪಿಗೆ ನೀಡಿಲ್ಲ.

ನಂತರ ಅದೇ ಗ್ರಾಮದ ರುದ್ರೇಗೌಡ ಮತ್ತು ಹಿರೇಗೌಡರ್​ ಎಂಬುವವರು ತಮ್ಮ ಜಮೀನಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಸುಮಾರು ಮೂರು ಗಂಟೆ ತಡವಾಗಿ ಅಂತ್ಯಕ್ರಿಯೆ ನಡೆದಿದೆ.

ಇದನ್ನೂ ಓದಿ: ಅಂಕೋಲಾ: ಕಪ್ಪೆ ಚಿಪ್ಪು ತೆಗೆಯುವಾಗ ಕಾಲು ಜಾರಿ ಮೂವರು ವಿದ್ಯಾರ್ಥಿಗಳು ನೀರುಪಾಲು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.