ಹುಬ್ಬಳ್ಳಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ತನ್ನದೇ ಆದ ಸಾಧನೆಯ ಮೂಲಕ ಹಲವಾರು ಯಶಸ್ವಿ ಚಿಕಿತ್ಸೆ ನೀಡಿ ಹೆಸರು ಮಾಡಿರುವ ಕಿಮ್ಸ್ ಆಸ್ಪತ್ರೆ ಮತ್ತೊಂದು ಸಾಧನೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ರಾಜ್ಯದಲ್ಲಿಯೇ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆ, 101 ಕೋವಿಡ್ ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆಯಂತಹ ಕಾರ್ಯವನ್ನು ಮಾಡಿರುವ ಕಿಮ್ಸ್, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿರುವ ಸಂದರ್ಭದಲ್ಲಿ ಆಗಸ್ಟ್ ತಿಂಗಳವರೆಗೆ 546 ರೋಗಿಗಳಿಗೆ ಅರ್ಥೋಪೆಡಿಕ್ ಚಿಕಿತ್ಸೆ ನೀಡುವ ಮೂಲಕ ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿದೆ. ಅಲ್ಲದೇ 25 ಕೋವಿಡ್ ಸೋಂಕಿತರಿಗೆ ಅರ್ಥೋಪೆಡಿಕ್ ಚಿಕಿತ್ಸೆ ನೀಡಿದೆ.
ಲಾಕ್ಡೌನ್ ಪೂರ್ವದಲ್ಲಿ ಆರು ತಿಂಗಳಲ್ಲಿ 1,400ಕ್ಕೂ ಹೆಚ್ಚು ಅರ್ಥೋಪೆಡಿಕ್ ಚಿಕಿತ್ಸೆ ನೀಡುತ್ತಿದ್ದ ಕಿಮ್ಸ್ ಆಸ್ಪತ್ರೆ ಲಾಕ್ಡೌನ್ ಸಂದರ್ಭದಲ್ಲಿ ರೋಗಿಗಳು ಕಿಮ್ಸ್ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಈ ವೇಳೆಯೂ 546 ಜನರಿಗೆ ಯಶಸ್ವಿ ಅರ್ಥೋಪೆಡಿಕ್ ಚಿಕಿತ್ಸೆ ನೀಡಿದ್ದು ಗಮನಾರ್ಹ ಸಂಗತಿಯಾಗಿದೆ.
ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ನಿರ್ದೇಶನದಲ್ಲಿ ಡಾ.ಸೂರ್ಯಕಾಂತ ಅವರು ತಮ್ಮ ಅರ್ಥೋಪೆಡಿಕ್ ಚಿಕಿತ್ಸೆ ವಿಭಾಗದ ಸಿಬ್ಬಂದಿ ಸಹಯೋಗದೊಂದಿಗೆ ಇಂತಹ ಮಹತ್ವದ ಕಾರ್ಯವನ್ನು ನಿಭಾಯಿಸಿದೆ. ಅಲ್ಲದೇ ಕೊರೊನಾ ಭೀತಿ ಹಿನ್ನೆಲೆಯಲ್ಲಿ ರೋಗಿಗಳು ತಡವಾಗಿ ಚಿಕಿತ್ಸೆ ಪಡೆಯಲು ಕಿಮ್ಸ್ ಆಸ್ಪತ್ರೆಗೆ ಬರುತ್ತಿದ್ದಾರೆ. ಅಲ್ಲದೇ ಸುಮಾರು 14ಕ್ಕೂ ಹೆಚ್ಚು ಹಿಪ್ ಜಾಯಿಂಟ್ ಚೇಂಜ್ ಅಂತಹ ಕ್ಲಿಷ್ಟಕರವಾದ ಆಪರೇಷನ್ ಕೂಡ ಕಿಮ್ಸ್ ಮಾಡಿರುವುದು ನಿಜಕ್ಕೂ ಶ್ಲಾಘನೀಯ.