ಹುಬ್ಬಳ್ಳಿ: ನಗರದ ಸ್ಟೇಷನ್ ರಸ್ತೆಯಲ್ಲಿರುವ ಖಾಸಗಿ ಪೆಟ್ರೋಲ್ ಪಂಪ್ನಲ್ಲಿ ಪೆಟ್ರೋಲ್ನಲ್ಲಿ ಸೀಮೆಎಣ್ಣೆ ವಾಸನೆ ಬರುತ್ತಿದೆ ಎಂದು ಗ್ರಾಹಕರು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ಪೆಟ್ರೋಲ್ ಪಂಪ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಗ್ರಾಹಕರು ಬಂದಾಗ, ಅದರಿಂದ ಸೀಮೆಎಣ್ಣೆ ವಾಸನೆ ಬರುತ್ತಿರೋದು ಗ್ರಾಹಕರಿಗೆ ಕಂಡು ಬಂದಿದೆ. ಈ ಪೆಟ್ರೋಲ್ ಅನ್ನು ಖಾಸಗಿ ಲ್ಯಾಬ್ಗೆ ಕಳುಹಿಸಿ ಪರೀಕ್ಷೆ ಮಾಡಿಸುವಂತೆ ಗ್ರಾಹಕರು ತಮ್ಮ ಆಕ್ರೋಶ ಹೊರಹಾಕಿದರು.
ಆದರೆ, ಪೆಟ್ರೋಲ್ ಪಂಪ್ನವರು ಮಾತ್ರ ನಾವು ಏನನ್ನು ಮಿಶ್ರಣ ಮಾಡಿಲ್ಲ, ಪೆಟ್ರೋಲ್ ರೀತಿಯ ವಾಸನೆ ಬರುತ್ತಿದೆ. ಕಂಪನಿಯಿಂದ ಯಾವ ರೀತಿಯಾಗಿ ಪೆಟ್ರೋಲ್ ಬಂದಿದೆಯೋ ಅದೇ ರೀತಿ ಮಾರಾಟ ಮಾಡುತ್ತಿದ್ದೇವೆ ಅಂತಾ ಹೇಳುತ್ತಿದ್ದಾರೆ.