ಧಾರವಾಡ : ಕೋವಿಡ್ 2ನೇ ಅಲೆ ಭೀತಿ ಹಿನ್ನೆಲೆ ಕವಿವಿ ಪರೀಕ್ಷೆ ಮುಂದೂಡಿದ ಪರಿಣಾಮ ವಸತಿ ನಿಲಯದಿಂದ ವಿದ್ಯಾರ್ಥಿನಿಯರು ತಮ್ಮೂರಿನತ್ತ ಹೊರಟಿದ್ದ ದೃಶ್ಯ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಕಂಡು ಬಂತು.
ನಿನ್ನೆ ವಿದ್ಯಾರ್ಥಿಗಳು ಕವಿವಿಯಲ್ಲಿ ಪ್ರತಿಭಟಿಸಿ ವಸತಿ ನಿಲಯದಲ್ಲಿ ಕೊರೊನಾ ಹೆಚ್ಚಾಗಿದೆ. ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿದ್ದರು. ಆ ಹಿನ್ನೆಲೆ ಕವಿವಿ ಅನಿರ್ದಿಷ್ಟಾವಧಿ ಕಾಲ ಪರೀಕ್ಷೆ ಮುಂದೂಡಿದ ಕಾರಣ ತಮ್ಮೂರತ್ತ ಪ್ರಯಾಣ ಬೆಳೆಸಿದ್ದಾರೆ.
ಕವಿವಿಯ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಒಂದೆಡೆ ಹಾಸ್ಟೆಲ್ನ ಕೆಲ ವಿದ್ಯಾರ್ಥಿನಿಯರಿಗೆ ಕೊರೊನಾ ತಗುಲಿದೆ. ಹೊರ ಜಿಲ್ಲೆಗಳಿಂದ ಬಂದಿರುವ ಬಹುತೇಕ ವಿದ್ಯಾರ್ಥಿಗಳು ಮರಳಿ ಊರಿಗೆ ಹೋಗುತ್ತಿದ್ದಾರೆ.