ಹುಬ್ಬಳ್ಳಿ: ಕೊರಚ , ಕೊರಮ, ಭಜಂತ್ರಿ, ಭೋವಿವಡ್ಡರ ,ಲಂಬಾಣಿ ಜನಾಂಗದವರನ್ನ ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕೆಂದು ಕೆಲವರು ಷಡ್ಯಂತ್ರ ಮಾಡುತ್ತಿರುವುದನ್ನ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಕೊರಚ, ಕೊರಮ, ಭಜಂತ್ರಿ, ಭೋವಿವಡ್ಡರ,ಲಂಬಾಣಿ ಜನಾಂಗದ 1 ಕೋಟಿಗೂ ಹೆಚ್ಚು ಜನರಿದ್ದು, ಇವರನ್ನ ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಆದರೆ, ನಿಜವಾಗಿಯೂ ಈ ಸಮುದಾಯಗಳು ಶೈಕ್ಷಣಿಕ, ಆರ್ಥಿಕ,ಸಾಮಾಜಿಕವಾಗಿ ಹಿಂದುಳಿದಿವೆ.
ಆದರೂ ಸಹ ಕಳೆದ ಹತ್ತು ವರ್ಷಗಳಿಂದ ಕೆಲವರು ಈ ಜನಾಂಗಗಳನ್ನ ಎಸ್ಸಿ ಪಟ್ಟಿಯಿಂದ ಹೊರಗಿಡುವಂತೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನ ರಾಜ್ಯದ ಕಾರ್ಯದರ್ಶಿಗಳು ವಜಾ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.