ETV Bharat / city

ಆಧಾರ ರಹಿತ ಆರೋಪ ಸರಿಯಲ್ಲ -'congress' ಬೇಜವಾಬ್ದಾರಿ ಪಕ್ಷ: ಜಗದೀಶ್ ಶೆಟ್ಟರ್ ವ್ಯಂಗ್ಯ - ಬಿಟ್ ಕಾಯಿನ್ ಹಗರಣ

ಬಿಟ್ ಕಾಯಿನ್ ಹಗರಣ (bitcoin case) ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಆಧಾರ ರಹಿತ ಆರೋಪ(congress leaders statements) ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್(jagadish shettar) ಆಕ್ರೋಶ ವ್ಯಕ್ತಪಡಿಸಿದ್ದಾರೆ.

jagadish shettar
ಜಗದೀಶ್ ಶೆಟ್ಟರ್
author img

By

Published : Nov 11, 2021, 1:35 PM IST

Updated : Nov 11, 2021, 1:51 PM IST

ಹುಬ್ಬಳ್ಳಿ: ಬಿಟ್ ಕಾಯಿನ್ ಹಗರಣ (bitcoin case) ವಿಚಾರದಲ್ಲಿ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ(congress leaders statements) ಮಾಡುವುದು ಸರಿಯಲ್ಲ. ಈ ರೀತಿ ಆಧಾರ ರಹಿತ ಆರೋಪ ಮಾಡುವುದರಿಂದ ಕಾಂಗ್ರೆಸ್ ಪಕ್ಷ (congress party) ಬೇಜವಾಬ್ದಾರಿ ರಾಜಕೀಯ ಪಕ್ಷ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್(jagadish shettar ) ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್

ನಗರದಲ್ಲಿಂದು ಮಾತನಾಡಿದ ಅವರು, ರಾಜಕಾರಣ(politics) ಸಲುವಾಗಿ ಈ ರೀತಿ ಆರೋಪ ಸರಿಯಲ್ಲ. ಸರಿಯಾದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಯಾರೋ ಮಾಡ್ತಾರೆ ಎನ್ನುವ ಸಲುವಾಗಿ, ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ.

ಚಾರ್ಜ್ ಶೀಟ್​​ನಲ್ಲಿ ಕಾಂಗ್ರೆಸ್ ನಾಯಕರ ಹೆಸರು?

ಈ ರೀತಿ ಆರೋಪ ಮಾಡೋದು, ರಾಜಕೀಯ ಪಕ್ಷಕ್ಕೆ ಒಳ್ಳೆಯದಲ್ಲ ಎಂದರು. ಚಾರ್ಜ್ ಶೀಟ್​​ನಲ್ಲಿ ಕಾಂಗ್ರೆಸ್ ನಾಯಕರ ಹೆಸರೇ ಬಂದಿದೆ‌. ಅದಕ್ಕೆ ನೀವು ಏನು ಉತ್ತರ ಕೊಡ್ತೀರಿ ಎಂದು ಕೈ ನಾಯಕರಿಗೆ ಶೆಟ್ಟರ್ ಪ್ರಶ್ನಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ; ಬಿಟ್ ಕಾಯಿನ್ ಹಗರಣದ ಕುರಿತು ನಮೋಗೆ ಮಾಹಿತಿ?

ಅವಸರ ಏಕೆ? ಸಾಕ್ಷಿ ಪುರಾವೆ ಇದ್ದರೆ ಹಾಜರು ಪಡಿಸಿ. ಬೇರೆ ಬೇರೆ ಸರ್ಕಾರ ಇದ್ದಾಗಲೂ ಸಿಬಿಐನಿಂದ ಸಾಕಷ್ಟು ಕೇಸ್​ಗಳ ತನಿಖೆ ಆಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಪತ್ರ ವ್ಯವಹಾರ ಇರುತ್ತದೆ. ಅದನ್ನೇ ಇಟ್ಟುಕೊಂಡು ನೀವು ಅಲಿಗೇಷನ್ ಮಾಡ್ತೀರಾ? ಎಂದ ಅವರು, ಎಲ್ಲರ ಬಗ್ಗೆ ಅನುಮಾನ ವ್ಯಕ್ತಪಡಿಸುವುದೇ ನಿಮ್ಮ ಡ್ಯೂಟಿ ಆಗಿದೆ. ಆಧಾರ ರಹಿತ ಆರೋಪ ಮಾಡುವ ಕಾಂಗ್ರೆಸ್ ಬೇಜವಾಬ್ದಾರಿ ಪಕ್ಷ ಎಂದು ವ್ಯಂಗ್ಯವಾಡಿದರು.

ಸಿಎಂ ದೆಹಲಿ ಪ್ರವಾಸ:

ಸಿಎಂ ದೆಹಲಿ ಪ್ರವಾಸದ ಕುರಿತು ಮಾತನಾಡಿದ ಅವರು, ಬಿಟ್ ಕಾಯಿನ್ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲ. ಹಲವು ನೀರಾವರಿ ಯೋಜನೆಗಳನ್ನು ಚರ್ಚೆ ಮಾಡಲು ದೆಹಲಿಗೆ ಹೋಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.

Last Updated : Nov 11, 2021, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.