ಹುಬ್ಬಳ್ಳಿ: ಉದ್ಯೋಗ ಸಾಮ್ರಾಟ ಎಂದೇ ಖ್ಯಾತಿ ಪಡೆದ ಇನ್ಫೋಸಿಸ್ ಕ್ಯಾಂಪಸ್ ಆರಂಭದ ಮುನ್ಸೂಚನೆ ಸಿಕ್ಕಿದೆ. ಆ.1 ರಂದು ಹುಬ್ಬಳ್ಳಿಯಲ್ಲಿ ಶಾಖೆ ಆರಂಭಿಸಲಾಗುತ್ತಿದೆ. ಇದರಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರಿಗೆ ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದ ಜನರಲ್ಲಿ ಆಶಾಭಾವನೆ ಮೂಡಿದೆ.
ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆರಂಭಿಸುವಂತೆ ಹಲವು ಬಾರಿ ಹೋರಾಟ ನಡೆಸಲಾಗಿತ್ತು. ಸಂತೋಷ ನರಗುಂದ ಅವರ ನೇತೃತ್ವದಲ್ಲಿ 'ಇನ್ಸೋಸಿಸ್ ಸ್ಟಾರ್ಟ್ ಅಭಿಯಾನ' ಕೂಡ ಆರಂಭಿಸಿ, ಮುಖ್ಯಸ್ಥರ ಗಮನ ಸೆಳೆದಿತ್ತು. ಇದರ ಮುಂದುವರೆದ ಭಾಗವಾಗಿ ಈಗ ಇನ್ಫೋಸಿಸ್ ಕ್ಯಾಂಪಸ್ ಆರಂಭಿಸುವುದಕ್ಕೆ ಸಂಸ್ಥೆ ಮುಂದಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದರಿಂದ ಸಾರ್ವಜನಿಕರು ಹಾಗೂ ಈ ಹಿಂದೆ ಹೋರಾಟ ಮಾಡಿದ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಇನ್ಫೋಸಿಸ್ ಆರಂಭವಾದರೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಉದ್ಯೋಗ ಸಾಮ್ರಾಟ್ ಇನ್ಫೋಸಿಸ್ ಆರಂಭಕ್ಕೆ 10,000 ಮನವಿ: ಅಭಿವೃದ್ಧಿಗಾಗಿ ಅಭಿಯಾನ