ETV Bharat / city

ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ‌ಉಗುಳಿ ಪೊಲೀಸರ ಕೈಗೆ ತಗ್ಲಾಕ್ಕೊಂಡ ಸುಪಾರಿ ಕಿಲ್ಲರ್​​!​ - ಸಾರ್ವಜನಿಕ ಸ್ಥಳದಲ್ಲಿ ‌ಉಗುಳಿ ಪೊಲೀಸರಿಗೆ ಸಿಕ್ಕಿ ಬಿದ್ದ ಸುಪಾರಿ ಕಿಲ್ಲರ್

ಕುಖ್ಯಾತ ರೌಡಿ, ಕಲಬುರಗಿಯಲ್ಲಿ ನಡೆದ ಕೊಲೆ‌ ಪ್ರಕರಣದ ಪ್ರಮುಖ ಆರೋಪಿ ಸಲೀಂ ಬಳ್ಳಾರಿ ಎಂಬಾತನನ್ನು ಬಂಧಿಸುವಲ್ಲಿ ಕಸಬಾ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅರೆಸ್ಟ್​
ಅರೆಸ್ಟ್​
author img

By

Published : May 16, 2020, 12:24 PM IST

ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಉಗುಳಿ‌ ಸುಪಾರಿ ‌ಕಿಲ್ಲರ್​ವೊಬ್ಬ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿರುವ ಘಟನೆ ನಿನ್ನೆ ತಡರಾತ್ರಿ ನೇಕಾರ ನಗರದಲ್ಲಿ ನಡೆದಿದೆ.

ಕುಖ್ಯಾತ ರೌಡಿ, ಕಲಬುರಗಿಯಲ್ಲಿ ನಡೆದ ಕೊಲೆ‌ ಪ್ರಕರಣ ಪ್ರಮುಖ ಆರೋಪಿ ಸಲೀಂ ಬಳ್ಳಾರಿ ಬಂಧಿತ ಸುಪಾರಿ‌ ಕಿಲ್ಲರ್. ಈತನ ಮೇಲೆ ಹಲವು ಪ್ರಕರಣಗಳಿದ್ದು, ಎಲ್ಲವನ್ನು ‌ಮರೆಮಾಚಿ ನೇಕಾರ ನಗರದಲ್ಲಿ ಮನೆ ಮಾಡಿಕೊಂಡಿದ್ದ. ಆದ್ರೆ ನಿನ್ನೆ ರಾತ್ರಿ ಕುಡಿದು ಸ್ಥಳೀಯ ಅಂಬಿಕಾ ಸಾವಜಿ ಹೋಟೆಲ್​ಗೆ ಹೋಗಿದ್ದಾನೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಈತನಿಗೆ ಊಟ ನೀಡಲು ನಿರಾಕರಿಸಿದಾಗ, ಹೋಟೆಲ್‌ ಮುಂದೆ ಉಗುಳಿದ್ದಾನೆ. ಆಗ ಸ್ಥಳೀಯರು ಹಾಗೂ ಹೋಟೆಲ್ ಮಾಲೀಕ ಸೇರಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.‌ ಇಷ್ಟಾಗುತ್ತಿದ್ದಂತೆ ತಾನೇ ಕಂಬಕ್ಕೆ ತಲೆ ಚಚ್ಚಿಕೊಂಡಿದ್ದಾನೆ. ಈತನ ಸ್ಥಿತಿ‌ ಕಂಡು ಜನರು ಕಸಬಾ ಠಾಣೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಈತ ಸಲೀಂ ಬಳ್ಳಾರಿ ಎಂಬುದು ತಿಳಿದು ಬಳಿಕ‌ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಅಲ್ಲಿಯೂ ಕೂಡ ಈತ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ‌.‌ ಈ ಕುರಿತು ಕಸಬಾ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.