ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಹುಬ್ಬಳ್ಳಿಯ ರೈಲ್ವೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಸನ್ನಿ ಸನ್ಮಾನ ಹವೀಜಾ (24) ಬಂಧಿತ ಆರೋಪಿ. ಈತನಿಂದ ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಿವಿಧ ಕಂಪನಿಯ ಮೊಬೈಲ್ಗಳ ವಶಕ್ಕೆ ಪಡೆಯಲಾಗಿದೆ.
ರೈಲ್ವೆ ಎಸ್ಪಿ ಡಿ.ಆರ್. ಸಿರಿಗೌರಿ, ಡಿಎಸ್ಪಿ ಪುಷ್ಪಲತಾ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೆ.ಎಂ. ಕಾಲೆಮಿರ್ಚಿ, ಪಿಎಸ್ಐ ಸತ್ಯಪ್ಪ, ಸಿಬ್ಬಂದಿ ನಿಂಗಪ್ಪ ಹಾವನ್ನಗೋಳ, ಬಸವರಾಜ ಯಕ್ಕಣ್ಣನವರ, ರಮೇಶ ಲಮಾಣಿ, ಪ್ರವೀಣ ಪಾಟೀಲ್ ಭಾಗಿಯಾಗಿದ್ದರು.