ಹುಬ್ಬಳ್ಳಿ : ಕೋವಿಡ್ ನಿಯಮ ಪಾಲನೆಗೆ ಹಗಲಿರುಳು ಕೆಲಸ ನಿರ್ವಹಿಸುತ್ತಿರುವ ಅವಳಿ ನಗರ ಪೊಲೀಸರು ಮೂರ್ಛೆ ಹೋದ ಯುವಕನನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮೂರ್ಛೆ ರೋಗದಿಂದ ಕುಸಿದು ಬಿದ್ದಿದ್ದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹುಬ್ಬಳ್ಳಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಗರದ ಚೆನ್ನಮ್ಮ ವೃತ್ತದ ಬಳಿ ಕುಂದಾಪುರ ಮೂಲದ ನಾಗರಾಜ ಎಂಬುವರು ಮೂರ್ಛೆ ರೋಗದಿಂದ ಬಿದ್ದಿದ್ದರು. ಈ ವೇಳೆ ಅಲ್ಲೇ ಇದ್ದ ಪೊಲೀಸರು ಯುವಕನ ಕೈಗೆ ಕೀ ಕೊಟ್ಟು, ಕೈ ಉಜ್ಜಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಹುಬ್ಬಳ್ಳಿ ಉಪನಗರ ಪೊಲೀಸ್ ಸಿಬ್ಬಂದಿಯ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಓದಿ: ಮೇಕೆದಾಟು ಪಾದಯಾತ್ರೆ ಪ್ರಾರಂಭಿಸುವ ಮುನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ