ETV Bharat / city

ರೈಲ್ವೆ ಐಸೋಲೇಷನ್​ ಬೋಗಿಗಳ​ ಬಳಕೆಗೆ ಧಾರವಾಡ ಜಿಲ್ಲಾಡಳಿತ ಚಿಂತನೆ - raiway coaches

ಹುಬ್ಬಳ್ಳಿಯಲ್ಲಿ 96 ಕೋಚ್​​ಗಳನ್ನ ಐಸೋಲೇಷನ್ ಬೋಗಿಗಳಾಗಿ ಮಾರ್ಪಾಡು ಮಾಡಲಾಗಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ನೈಋತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಸಮಾಲೋಚನೆ ನಡೆಸಿದೆ.

raiway isolation coaches
ರೈಲ್ವೆ ಐಸೋಲೇಷನ್​ ಕೋಚ್
author img

By

Published : Jul 14, 2020, 2:02 PM IST

ಹುಬ್ಬಳ್ಳಿ: ದೇಶದಾದ್ಯಂತ ಕೊರೊನಾ ಹಾವಳಿ ದಿನೇ ದಿನೆ ಹೆಚ್ಚಾಗ್ತಿದೆ. ಸೋಂಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಕಳೆದ ಮೂರು ತಿಂಗಳ ಹಿಂದಷ್ಟೇ ಕೈಜೋಡಿಸಿದ್ದ ರೈಲ್ವೆ ಇಲಾಖೆಯ ಸಹಾಯ ಪಡೆಯಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.

ರೈಲ್ವೆ ಐಸೋಲೇಷನ್​ ಬೋಗಿಗಳ​ ಬಳಕೆಗೆ ಜಿಲ್ಲಾಡಳಿತ ಚಿಂತನೆ

ದೇಶಾದ್ಯಂತ ಹಲವೆಡೆ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್​ಗಳ ಕೊರತೆ ಹಿನ್ನೆಲೆ ರೈಲು ಬೋಗಿಗಳನ್ನೇ ಐಸೋಲೇಷನ್ ವಾರ್ಡ್​ಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಕೂಡ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಮೂರು ತಿಂಗಳಿನಿಂದ ಕಾರ್ಯನಿರ್ವಹಿಸದೆ ವರ್ಕ್ ಶಾಪ್​​ನಲ್ಲಿಯೇ‌ ಉಳಿದುಕೊಂಡಿದ್ದ ಐಸೋಲೇಷನ್​ ಬೋಗಿಗಳ ಬಳಕೆಗೆ ಜಿಲ್ಲಾಡಳಿತ ಈಗಾಗಲೇ ನೈಋತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆ.

ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ, ಮಂಗಳೂರು, ಮೈಸೂರು ಸೇರಿದಂತೆ ಈಗಾಗಲೇ 312 ರೈಲ್ವೆ ಕೋಚ್​​ಗಳನ್ನು ಐಸೋಲೇಷನ್ ಬೋಗಿಗಳಾಗಿ ಪರಿವರ್ತನೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲೇ 96 ಕೋಚ್​​ಗಳನ್ನ ಐಸೋಲೇಷನ್ ಬೋಗಿಗಳಾಗಿ ಮಾರ್ಪಾಡು ಮಾಡಲಾಗಿದೆ.

ಒಂದು ಬೋಗಿಯಲ್ಲಿ ಎಂಟು ಜನರಂತೆ ಒಟ್ಟು 2,400ಕ್ಕೂ ಅಧಿಕ ಬೆಡ್​​ಗಳ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಲಕ್ಷಣಗಳು ಕಂಡು ಬಂದ ಯಾವುದೇ ವ್ಯಕ್ತಿ ಇಲ್ಲಿಗೆ ಸ್ವಯಂ ಪ್ರೇರಿತವಾಗಿ ಬಂದು ತಮಗೆ ಸೋಂಕು ತಗುಲಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಪರೀಕ್ಷೆಗೆ ಒಳಪಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.