ETV Bharat / city

ಹುಬ್ಬಳ್ಳಿ ಗಲಭೆ: ಬಂಧಿತ ಆರೋಪಿಗೆ ಪರೀಕ್ಷೆ ಬರೆಯಲು ಕೋರ್ಟ್‌ ಅನುಮತಿ - Hubli riot case accused

ಹುಬ್ಬಳ್ಳಿ ಗಲಭೆ ಪ್ರಕರಣದ ಬಂಧಿತ ಆರೋಪಿಗೆ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿದೆ.

Hubli court permission to a accused to write a exam
ಬಂಧಿತ ಆರೋಪಿಗೆ ಪರೀಕ್ಷೆ ಬರೆಯಲು ಅನುಮತಿ
author img

By

Published : Apr 22, 2022, 7:08 PM IST

ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿ ಗಲಭೆ ಪ್ರಕರಣದ ಬಂಧಿತ ಆರೋಪಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅನುಮತಿ ನೀಡಿ ಹುಬ್ಬಳ್ಳಿಯ 4ನೇ ಜೆಎಮ್‌ಎಫ್​ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ಯುವಕನನ್ನು ಪ್ರಕರಣದ 124ನೇ ಆರೋಪಿಯಾಗಿ ಬಂಧಿಸಿದ್ದರು. ಆನಂದ್ ನಗರ ನಿವಾಸಿ‌ಯಾಗಿರುವ ಈತ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇಂದು ಪರೀಕ್ಷೆ ಬರೆಯಬೇಕಿತ್ತು. ಪೋಷಕರಿಗೆ ಈ ಬಗ್ಗೆ ಯಾರನ್ನು ಭೇಟಿಯಾಗಬೇಕೆಂಬುದು ತೋಚದ ಕಾರಣ ಆರೋಪಿ ಇಂದಿನ ಪರೀಕ್ಷೆ ಮಿಸ್ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಪೊಲೀಸ್ ಬಂದೋಬಸ್ತ್​​ನಲ್ಲಿ ಪರೀಕ್ಷೆ ಬರೆದು ಕಾರಾಗೃಹಕ್ಕೆ ತೆರಳಿದ ಆರೋಪಿ

ನಂತರ ಪೋಷಕರು ವಕೀಲರನ್ನು ಭೇಟಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿದ್ದು, ಮುಂದಿನ ಐದು ಪರೀಕ್ಷೆಯನ್ನು ಪೊಲೀಸ್ ಭದ್ರತೆಯಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.