ETV Bharat / city

ಕಾರ್ಪೋರೇಟರ್ ಪತಿ ಇರಲಿ ಅವರಪ್ಪ ಇರಲಿ ಯಾರನ್ನೂ ಬಿಡಲ್ಲ: ಹುಬ್ಬಳ್ಳಿ ಗಲಭೆ ಕುರಿತು ಕೇಂದ್ರ ಸಚಿವ ಜೋಶಿ

ಹಳೇ ಹುಬ್ಬಳ್ಳಿಯ ಗಲಭೆಯಲ್ಲಿ ಭಾಗಿಯಾದವರಲ್ಲಿ ಯಾರನ್ನೂ ಕೂಡ ಬಿಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ ಗಲಭೆ ಕುರಿತು ಕೇಂದ್ರ ಸಚಿವ ಜೋಶಿ
ಹುಬ್ಬಳ್ಳಿ ಗಲಭೆ ಕುರಿತು ಕೇಂದ್ರ ಸಚಿವ ಜೋಶಿ
author img

By

Published : Apr 17, 2022, 9:00 PM IST

Updated : Apr 17, 2022, 11:00 PM IST

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಾಟೆ ಪ್ರಕರಣ ಸಂಬಂಧ 80 ರಿಂದ 85 ಜನರನ್ನು ಈಗಾಗಲೇ ಬಂಧಿಸಿದ್ದೇವೆ. ಗಲಭೆಕೋರರ ಮೇಲೆ ಕಟ್ಟು ನಿಟ್ಟಿ ಕ್ರಮ ಕೈಗೊಳ್ಳುತ್ತೇವೆ. ರೌಡಿಶೀಟರ್ ಕೇಸ್ ಹಾಕಿ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಿನ್ನೆ ನಡೆದ ಗಲಭೆ ಬಗ್ಗೆ ಮಾಹಿತಿ ಪಡೆದಿದ್ದೇವೆ. ವಿಡಿಯೋ ಎನಿಮೇಶನ್ ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದಾದ ಮೇಲೂ ಗೂಂಡಾಗಿರಿ ಮಾಡೋದು, ಪೊಲೀಸ್ ವಾಹನದ ಮೇಲೆ ಕಲ್ಲು ತೂರೋದು ಅಕ್ಷ್ಯಮ್ಯ ಅಪರಾಧ. ತಪ್ಪಿತಸ್ಥರನ್ನು ಒಳಗೆ ಹಾಕಲು ಹೇಳಿದ್ದೇನೆ. ಇನ್ನೊಂದು ಬಾರಿ ಈ ರೀತಿಯ ಕೃತ್ಯಕ್ಕೆ ಇಳಿಯದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದೇವೆ ಎಂದರು.

ಹುಬ್ಬಳ್ಳಿ ಗಲಭೆ ಕುರಿತು ಕೇಂದ್ರ ಸಚಿವ ಜೋಶಿ

ಎನಿಮೇಶನ್ ಹಾಕಿದ ಹುಡುಗನ ಮನೆಗೆ ಕೆಲ ಗೂಂಡಾಗಳು ಹೋಗಿದ್ದರು ಎನ್ನುವ ಮಾಹಿತಿ ಇದೆ. ಆ ವೇಳೆ ಲಾಂಗು, ಮಚ್ಚು ತೋರಿಸಿ ಬೆದರಿಕೆಯನ್ನು ಹಾಕಿದ್ದಾರೆ. ಬೆದರಿಕೆ ಹಾಕಿದವರನ್ನು ಬಂಧಿಸಬೇಕು. ಕಾರ್ಪೊರೇಟರ್ ಪತಿ ಇರಲಿ, ಅವರಪ್ಪ ಇರಲಿ ಯಾರನ್ನೂ ಬಿಡಲ್ಲ. ಹುಬ್ಬಳ್ಳಿ ಬಹಳ ಸೂಕ್ಷ್ಮ ಪ್ರದೇಶ. ಕಳೆದ 15 ವರ್ಷದ ಹಿಂದೆ ಈ ರೀತಿಯ ಗಲಭೆ ಆಗಿತ್ತು. ಅಲ್ಲಿಂದ ಹುಬ್ಬಳ್ಳಿಯಲ್ಲಿ ಯಾವುದೇ ಗಲಭೆ ಆಗಿದ್ದಿಲ್ಲ. ಈ ಗಲಾಟೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಬಗ್ಗೆ ಪೊಲೀಸರಿಗೆ ಗೃಹಸಚಿವರು ಆದೇಶಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

(ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಸಿಕ್ತು ಸಾಕ್ಷ್ಯ: ವಾಣಿಜ್ಯ ನಗರಿಯಲ್ಲಿ ಆ ಆಡಿಯೋ ಹೊತ್ತಿಸಿತಾ ಕಿಡಿ?)

Last Updated : Apr 17, 2022, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.