ಹುಬ್ಬಳ್ಳಿ: ಜಿಲ್ಲೆಯ ಪಿಂಚಣಿ ಪಡೆಯುವರ ಗೋಳು ಹೇಳ ತೀರದಾಗಿದ್ದು, ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಫಲಾನುಭವಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ನಗರದ ಮಿನಿ ವಿಧಾಸೌಧದಲ್ಲಿ ಪಿಂಚಣಿ ಹಣ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು ಐದು ತಿಂಗಳಿನಿಂದ ಪಿಂಚಣಿ ಬರದಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ.
ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೇವೆ. ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಬಂದರೂ ಯಾವುದಾರು ಒಂದು ಸಬೂಬು ಹೇಳುತ್ತಿದ್ದಾರೆ. ಸುಮಾರು ಐದಾರು ತಿಂಗಳಿನಿಂದ ಕಚೇರಿಗೆ ಅಲೆದಾಡುತ್ತಿದ್ದರೂ ಪಿಂಚಣಿ ಹಣ ಸರಿಯಾಗಿ ಸಂದಾಯವಾಗುತ್ತಿಲ್ಲ ಎಂದು ಪಿಂಚಣಿದಾರರು ದೂರುತ್ತಿದ್ದಾರೆ.