ETV Bharat / city

ಜಾಣತನ ತೋರಿದ ಕಿಮ್ಸ್​ ಆಡಳಿತ ಮಂಡಳಿ: ಗುಜರಿ ವಸ್ತುಗಳಿಗೆ ಮರುಜೀವ - hubli hospital news

ಕಿಮ್ಸ್​ನಲ್ಲಿ ಗುಜರಿ ಅಂತ ಬಿಸಾಕಿದ್ದ ವಸ್ತುಗಳನ್ನು ಮತ್ತೆ ಪರಿಶೀಲಿಸಿ ಅವುಗಳಿಗೆ ಮರುಜೀವ ನೀಡಿದ್ದಾರೆ. ಒಟ್ಟು 108 ಕಾಟ್​ಗಳಲ್ಲಿ 78 ಕಾಟ್​​ಗಳನ್ನು ಮರುಸಿದ್ಧಪಡಿಸಲಾಗಿದೆ. ಹಾಗೆಯೇ 17 ಸ್ಟ್ರೆಚರ್ಗಳು, 22 ಅಲ್ಮೇರಾ, ರೋಗಿಯ ಬಳಿ ಇಡಲು ಬೇಕಾದ ಸಣ್ಣ 26 ಲಾಕರ್‌ಗಳು ಸೇರಿದಂತೆ 5 ವ್ಹೀಲ್ ಚೇರ್‌ಗಳು, 8 ಸೀಟಿಂಗ್ ಬೆಂಚ್​ಗಳನ್ನು ಬಳಕೆಯೋಗ್ಯ ಮಾಡಲಾಗಿದೆ.

Kims Administration recycle of hospital waste
: ಗುಜರಿ ವಸ್ತುಗಳಿಗೆ ಮರು ಜೀವ
author img

By

Published : May 11, 2020, 1:37 PM IST

Updated : May 11, 2020, 2:38 PM IST

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿದ್ದ ನಿರುಪಯುಕ್ತ ಬೆಡ್, ಸ್ಟೆಚರ್ಸ್ ಹಾಗು ಕುರ್ಚಿಗಳನ್ನು ಮತ್ತೆ ಉಪಯೋಗಕ್ಕೆ ಬರುವ ಹಾಗೆ ಸಿದ್ಧಪಡಿಸಲಾಗಿದೆ.

ಒಟ್ಟು 4 ಜಿಲ್ಲೆಗಳಿಂದ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಅಗಮಿಸುತ್ತಾರೆ. ಆದ್ರೆ, ಇತ್ತೀಚೆಗೆ ಬೆಡ್​​​ಗಳ ಕೊರತೆ ಹೆಚ್ಚಾಗಿ ಕಾಡಿತ್ತು. ಇದನ್ನರಿತ ಸಿಬ್ಬಂದಿ ಈಗಾಗಲೇ ಬಳಕೆಯಾಗಿದ್ದ ಗುಜರಿ ವಸ್ತುಗಳಿಗೆ ಹೊಸ ರೂಪ ಕೊಟ್ಟು ಬಳಕೆಯೋಗ್ಯ ಮಾಡಿದ್ದಾರೆ.

ಗುಜರಿ ವಸ್ತುಗಳಿಗೆ ಮರುಜೀವ

ಒಟ್ಟು 108 ಕಾಟ್​ಗಳಲ್ಲಿ 78 ಕಾಟ್​​ಗಳನ್ನು ಮರು ಸಿದ್ಧಪಡಿಸಿದ್ದು, ಹಾಗೆಯೇ 17 ಸ್ಟ್ರೆಚರ್‌ಗಳು, 22 ಅಲ್ಮೇರಾ, ರೋಗಿಯ ಬಳಿ ಇಡಲು ಬೇಕಾದ ಸಣ್ಣ 26 ಲಾಕರ್‌ಗಳು ಸೇರಿದಂತೆ 5 ವ್ಹೀಲ್‌ಚೇರ್‌ಗಳು, 8 ಸೀಟಿಂಗ್ ಬೆಂಚ್​ಗಳನ್ನು ಮತ್ತೆ ಬಳಸಬಹುದಾಗಿದೆ.

ಈ ಮೂಲಕ ಕಿಮ್ಸ್‌ಗೆ 25 ಲಕ್ಷ ರೂ ಹಣ ಉಳಿತಾಯವಾಗಿದ್ದು, ಅದೇ ಹಣವನ್ನು ಮತ್ತಷ್ಟು ಬೆಡ್​ಗಳ ಕೊರತೆ ನೀಗಿಸಲು ಕಿಮ್ಸ್ ಆಡಳಿತ ಮಂಡಳಿ ತೀರ್ಮಾನಿಸಿದೆ.

Last Updated : May 11, 2020, 2:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.