ETV Bharat / city

ಧಾರವಾಡ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಆಕರ್ಷಿಸುತ್ತಿವೆ ಬಣ್ಣ-ಬಣ್ಣದ ಚಿತ್ತಾರಗಳು

ಒಂದು ಕಾಲದಲ್ಲಿ ಧಾರವಾಡ ರೈಲು ನಿಲ್ದಾಣಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಇದೀಗ ಎಲ್ಲವೂ ಬದಲಾಗಿದ್ದು, ನಿಲ್ದಾಣದ ಹೊರಭಾಗದಲ್ಲಿನ ವಾಲ್ ಗಾರ್ಡನ್ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.

author img

By

Published : Mar 29, 2021, 10:38 AM IST

High tech touch to Dharwad railway station
ಧಾರವಾಡ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

ಧಾರವಾಡ: ಕೆಲ ದಿನಗಳ ಹಿಂದಷ್ಟೇ ಹಳೆ ಕಟ್ಟಡದಿಂದ ಮುಕ್ತವಾಗಿರುವ ಧಾರವಾಡದ ರೈಲ್ವೆ ನಿಲ್ದಾಣಕ್ಕೆ ಇದೀಗ ಹೈಟೆಕ್ ಟಚ್ ಸಿಕ್ಕಿದ್ದು, ರೈಲ್ವೆ ನಿಲ್ದಾಣದಲ್ಲಿನ ಅಂದವಾದ ಚಿತ್ರಗಳು ಜನರನ್ನು ಆಕರ್ಷಿಸುತ್ತಿವೆ.

ಧಾರವಾಡ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

ಒಂದು ಕಾಲದಲ್ಲಿ ಧಾರವಾಡ ರೈಲು ನಿಲ್ದಾಣಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಇದೀಗ ಎಲ್ಲವೂ ಬದಲಾಗಿದ್ದು, ನಿಲ್ದಾಣದ ಹೊರಭಾಗದಲ್ಲಿನ ವಾಲ್ ಗಾರ್ಡನ್ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.

ಭರತನಾಟ್ಯ, ಯಕ್ಷಗಾನ, ಕಥಕಳಿ ಸೇರಿದಂತೆ ದಕ್ಷಿಣ ಭಾರತದ ವಿವಿಧ ನೃತ್ಯ ಪ್ರಕಾರಗಳ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದ್ದು, ಇವೆಲ್ಲವೂ ರೈಲ್ವೆ ನಿಲ್ದಾಣದ ಅಂದವನ್ನು ದ್ವಿಗುಣಗೊಳಿಸಿವೆ. ನಿಲ್ದಾಣದ ಬುಕ್ಕಿಂಗ್ ಆಫೀಸ್​ನ ಹೊರಭಾಗದಲ್ಲಿ ರವೀಂದ್ರನಾಥ ಠಾಗೋರ್ ಅವರ ಮೂರ್ತಿ ಕೆತ್ತನೆ ಮಾಡಲಾಗುತ್ತಿದೆ.

ಸೃಷ್ಟಿ ಆರ್ಟ್ ಏಜೆನ್ಸಿಯ ಸುಮಂಗಲಾ ಭಟ್ ಅವರ ನೇತೃತ್ವದ ಕಲಾವಿದರ ತಂಡ ಚಿತ್ರ ಬಿಡಿಸಿ, ರೈಲ್ವೆ ನಿಲ್ದಾಣದ ಅಂದವನ್ನು ಹೆಚ್ಚಿಸುತ್ತಿದ್ದಾರೆ.

ಒಟ್ಟಿನಲ್ಲಿ ಹಲವು ವರ್ಷಗಳಿಂದ ಕಳೆಗುಂದಿದ್ದ ರೈಲು ನಿಲ್ದಾಣ ಈಗ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು, ಮುಂದಿನ ಕೆಲ‌ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ.

ಓದಿ: ಸಿಡಿ ಪ್ರಕರಣ:ಮಾಜಿ ಶಾಸಕ ನಾಗರಾಜ್, ವಕೀಲರ ಜೊತೆ ವಿಚಾರಣೆಗೆ ಆಗಮಿಸಿದ ಜಾರಕಿಹೊಳಿ​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.