ಹುಬ್ಬಳ್ಳಿ: ಹೆಸ್ಕಾಂ ಸಿಬ್ಬಂದಿ ಯಡವಟ್ಟಿನಿಂದ ಸಾರ್ವಜನಿಕರು ಪರದಾಡಿದ ಘಟನೆ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ವಿಜಯನಗರ ಬಡಾವಣೆಯಲ್ಲಿ 20 ವರ್ಷಕ್ಕೂ ಅಧಿಕ ಹಳೆಯ ಮರಗಳನ್ನು ಹೆಸ್ಕಾಂ ಸಿಬ್ಬಂದಿ ಕಡಿದು ಹಾಕತ್ತಿದ್ದಾರೆ.
ಇದನ್ನು ಸಾರ್ವಜನಿಕರು ಪ್ರಶ್ನಿಸಿದರೆ, ಹಳೆ ಲೈಟ್ ಕಂಬಗಳನ್ನು ತೆಗೆದು ಹೊಸ ಲೈಟ್ ಕಂಬಗಳನ್ನು ಹಾಕುತ್ತಿದ್ದೇವೆ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.
ಒಂದೆಡೆ ಮರಗಳ ಮಾರಣಹೋಮ ಮಾಡುತ್ತಿದ್ದಾರೆ, ಇನ್ನೊಂದೆಡೆ ನಿನ್ನೆ ಕಡಿದು ಹಾಕಿದ್ದ ಮರದ ತುಂಡುಗಳನ್ನು ತೆಗೆದು ಹಾಕಿಲ್ಲ. ಇದರಿಂದ ಸಾರ್ವಜನಿಕರಿಗೆ ಓಡಾಡಲೂ ತೊಂದರೆಯಾಗುತ್ತಿದೆ. ಇದರಿಂದ ಬೇರೆ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ದಾರಿ ಸ್ಥಗಿತಗೊಂಡು, ವಾಹನ ಸವಾರರು ಹಾಗೂ ಬಡಾವಣೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾರ್ವಜನಿಕರು ಹೆಸ್ಕಾಂ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.