ETV Bharat / city

ಪೊಲೀಸರಿಂದ ಕಿರುಕುಳ ಆರೋಪ... ವಿಷ ಸೇವಿಸಿ ಆತ್ಮಹತ್ಯೆ ‌ಶರಣಾಗೋದಾಗಿ ವ್ಯಕ್ತಿ ಎಚ್ಚರಿಕೆ - ಪೊಲೀಸರು

2013 ರಲ್ಲಿ ಆಗಿನ ಹಳೇ ಹುಬ್ಬಳ್ಳಿ ‌ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಶಿವಾನಂದ ಚಲವಾದಿ ಅವರು ಸುಳ್ಳು ಕಳ್ಳತನ‌ ಕೇಸ್ ದಾಖಲಿಸಿದ್ದಾರೆ.‌ ಆಗಿನಿಂದ‌ ಇಲ್ಲಿಯವರೆಗೂ ಎಲ್ಲೇ ಕಳ್ಳತನವಾದರೂ ಎಲ್ಲಾ ಪ್ರಕರಣಗಳನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ ವ್ಯಕ್ತಿ ಮತ್ತು ಆತನ ಕುಟುಂಬಸ್ಥರು ದೂರಿದ್ದಾರೆ.

ತೌಸೀಫ್ ಮುಲ್ಲಾ ಮತ್ತು ಆತನ ಕುಟುಂಬ
author img

By

Published : Mar 21, 2019, 5:43 PM IST

ಹುಬ್ಬಳ್ಳಿ: ಪೊಲೀಸರು ಉದ್ದೇಶಪೂರ್ವಕವಾಗಿ ಕಳ್ಳತನ ಪ್ರಕರಣದಲ್ಲಿ ಸಿಲುಕಿಸಿ ನಿರಂತವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ತೌಸೀಫ್ ಮುಲ್ಲಾ ಹಾಗೂ ಅವರ ತಾಯಿ ಮೆಹರುನಿಸಾ ಮುಲ್ಲಾ ಅಳಲು ತೋಡಿಕೊಂಡರು.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ‌ ಮಾತನಾಡಿದ ಅವರು, 2013 ರಲ್ಲಿ ಆಗಿನ ಹಳೇ ಹುಬ್ಬಳ್ಳಿ ‌ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಶಿವಾನಂದ ಚಲವಾದಿ ಅವರು ಸುಳ್ಳು ಕಳ್ಳತನ‌ ಕೇಸ್ ದಾಖಲಿಸಿದ್ದಾರೆ.‌ ಆಗಿನಿಂದ‌ ಇಲ್ಲಿಯವರೆಗೂ ಎಲ್ಲೆ ಕಳ್ಳತನವಾದರೂ ಎಲ್ಲಾ ಕೇಸ್​ಗಳನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ತೌಸೀಫ್​ ದೂರಿದ್ದಾನೆ.

ತೌಸೀಫ್ ಮುಲ್ಲಾ ಮತ್ತು ಆತನ ಕುಟುಂಬ

ಈಗ ಹಳೇ ಹುಬ್ಬಳ್ಳಿ, ಮುಂಡಗೋಡ, ಹಾವೇರಿ, ಶಿಗ್ಗಾವಿ ಸೇರಿದಂತೆ ಹಲವು ಕಡೆ ಒಟ್ಟು 8 ಕೇಸ್​ಗಳನ್ನು ಹಾಕಿದ್ದಾರೆ. ಇದರಿಂದ ನಮ್ಮ‌ಕುಟುಂಬಕ್ಕೆ ಅನಗತ್ಯವಾಗಿ‌ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ಬೇಕು.‌ ಇಲ್ಲವಾದ್ರೆ ಕುಟುಂಬದ ಸದಸ್ಯರೆಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ‌ಮಾಡಿಕೊಳ್ಳುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪತ್ನಿ ಪರವಿನ್ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ‌

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.