ಹುಬ್ಬಳ್ಳಿ: ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ವತಿಯಿಂದ ಪತ್ರಿಕಾ ವಿತರಕರಿಗೆ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಪತ್ರಿಕೋದ್ಯಮದ ಅವಿಭಾಜ್ಯ ಅಂಗವೇ ಪ್ರಸರಣ. ಬಿಸಿಲು, ಮಳೆ, ಚಳಿ ಎನ್ನದೇ ದಿನ ಪತ್ರಿಕೆಗಳನ್ನು ಎಲ್ಲರ ಮನೆ ಹಾಗೂ ಮನ ಮುಟ್ಟಿಸುತ್ತಿರುವ ಪತ್ರಿಕಾ ವಿತರಕರ ಕಾರ್ಯ ಅಭಿನಂದನಾರ್ಹ.
ಪತ್ರಿಕೆಯನ್ನು ಬೆಳೆಸುವ ಕಾರ್ಯದಲ್ಲಿ ಕೈ ಜೋಡಿಸಿದ ವಿತರಕರ ಕಾರ್ಯ ಸ್ಮರಣೀಯವಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಕೂಡ ಭಯವನ್ನು ಬದಿಗಿಟ್ಟು ಧೈರ್ಯದಿಂದ ಮುನ್ನಡೆದ ವಿತರಕರ ಧೈರ್ಯ ಮೆಚ್ಚಲೇಬೇಕಾಗಿದೆ ಎಂದರು.