ETV Bharat / city

ಹುಬ್ಬಳ್ಳಿಯಲ್ಲಿ ಮಾಸ್ಕ್ ಧರಿಸದೇ ಕಾರಿನಲ್ಲಿ ಹೊರಟಿದ್ದ ವೈದ್ಯೆಗೆ ಬಿತ್ತು ದಂಡ - ಹುಬ್ಬಳ್ಳ

ಹೊಸೂರು ಸರ್ಕಲ್ ಬಳಿಯ ದುರ್ಗಾದೇವಿ ದೇವಸ್ಥಾನದ ಬಳಿ ಆರ್ ಎಲ್‌ ಸಂಸ್ಥೆಯ ಮಾರುತಿ ಪಾರ್ಸಲ್ ಸರ್ವಿಸ್ ಲಾರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆ ಲಾರಿ ಚಾಲಕನಿಗೆ ದಂಡ ವಿಧಿಸಲಾಯಿತು..

 fine to doctor who not wearing mask
fine to doctor who not wearing mask
author img

By

Published : May 25, 2021, 4:25 PM IST

ಹುಬ್ಬಳ್ಳಿ : ನಗರದಲ್ಲಿ ಲಾಕ್​​ಡೌನ್​ ನಿಯಮ ಕಟ್ಟುನಿಟ್ಟಾಗಿ ಜಾರಿಯಾದ ಹಿನ್ನೆಲೆ ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ಮಾಸ್ಕ್ ಧರಸದೇ ಕಾರಿನಲ್ಲಿ ಪ್ರಯಾಣಿಸುತಿದ್ದ ವೈದ್ಯೆಗೆ ಉಪನಗರ ಠಾಣೆ ಪೊಲೀಸರು ದಂಡ ಹಾಕಿದ್ದಾರೆ.

ಬೆಳಗ್ಗೆಯಿಂದಲೇ ಪೊಲೀಸರು ಸಾಕಷ್ಟು ರೀತಿಯ ಕೊರೊನಾ ಹಾಗೂ ವಿಪತ್ತು ನಿರ್ವಹಣೆ ನಿಯಮ ಪಾಲಿಸದವರಿಗೆ ಮುಲಾಜಿಲ್ಲದೇ ದಂಡ ಹಾಕುತ್ತಿದ್ದಾರೆ.

ಕಾರಿನಲ್ಲಿ ಹೊರಟಿದ್ದ ವೈದ್ಯೆ ಮಾಸ್ಕ್ ಧರಿಸಿರಲಿಲ್ಲ. ಆಗ ಉಪನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವೀಂದ್ರ ಬಡಫಕೀರಪ್ಪನವರ ಹಾಗೂ ಪ್ರೊಬೆಷನರಿ ಪಿಎಸ್ಐ ಉಮೇಶಗೌಡ ಪಾಟೀಲ ಅವರು ದಂಡ ಕಟ್ಟುವಂತೆ ಹೇಳಿದ್ದಾರೆ.

ಆಗ ವೈದ್ಯೆ ಹಾಗೂ ಅವರ ಚಾಲಕ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದರು. ಕೊನೆಗೆ ದಂಡದ ರಶೀದಿ ಹರಿದ ಮೇಲೆ ಅನಿವಾರ್ಯವಾಗಿ ದಂಡ ಕಟ್ಟಿ ಸ್ಥಳದಿಂದ ತೆರಳಿದ್ದಾರೆ.

ಹಾಗೆ ನಗರದ ಹೊಸೂರು ಸರ್ಕಲ್ ಬಳಿಯ ದುರ್ಗಾದೇವಿ ದೇವಸ್ಥಾನದ ಬಳಿ ಆರ್ ಎಲ್‌ ಸಂಸ್ಥೆಯ ಮಾರುತಿ ಪಾರ್ಸಲ್ ಸರ್ವಿಸ್ ಲಾರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆ ಲಾರಿ ಚಾಲಕನಿಗೆ ದಂಡ ವಿಧಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.