ETV Bharat / city

ಸೋಲಿನ ಭಯದಿಂದ ಹೆದರಿ ಹೊರಟ್ಟಿ ಬಿಜೆಪಿಗೆ ಸೇರಿದ್ದಾರೆ : ಸಲೀಂ ಅಹ್ಮದ್​ ವ್ಯಂಗ್ಯ - ಕಾಂಗ್ರೆಸ್​ ಅಭ್ಯರ್ಥಿ ಬಸವರಾಜ ಗುರಿಕಾರ

ಏಳು ಬಾರಿ ಸೆಕ್ಯುಲರ್ ಪಾರ್ಟಿಯಿಂದ ಸ್ಪರ್ಧೆ ಮಾಡಿದ್ದರಿಂದ ಜ್ಯಾತ್ಯಾತೀತ ಮತಗಳು ಬಸವರಾಜ ಹೊರಟ್ಟಿ ಅವರಿಗೆ ಹೋಗುತ್ತಿದ್ದವು. ಆದರೆ, ಇವತ್ತು ಅಧಿಕಾರದ ಆಸೆಯಿಂದ ಚೇರ್‌ಮೆನ್ ಆಗಬೇಕು ಎಂಬ ಆಸೆಯಿಂದ ಅವರು ಬಿಜೆಪಿ ಸೇರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ವ್ಯಂಗ್ಯವಾಡಿದ್ದಾರೆ..

Saleem Ahmad talked to Press
ಪತ್ರಕರ್ತರೊಂದಿಗೆ ಮಾತನಾಡಿದ ಎಂಎಲ್​ಸಿ ಸಲೀಂ ಅಹ್ಮದ್
author img

By

Published : May 25, 2022, 3:53 PM IST

ಧಾರವಾಡ : ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರು ಈ ಸಾರಿ ಗೆಲುವು ಸಾಧಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕಳೆದ 40 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಅವರು ಮಾಡಿರುವ ಪ್ರಾಮಾಣಿಕ ಕೆಲಸಕ್ಕೆ ಜನರು ಅವರನ್ನು ಗೆಲ್ಲಿಸುತ್ತಾರೆ.

ಶಿಕ್ಷಕರು ಬಿಜೆಪಿಯಿಂದ ಭ್ರಮನಿರಸನರಾಗಿದ್ದಾರೆ. ಬಿಜೆಪಿಗೆ ಯಾಕೆ ಮತ ಹಾಕಬೇಕು? ಬೆಲೆ ಏರಿಕೆಗೆ, ಭ್ರಷ್ಟಾಚಾರಕ್ಕಾಗಿ ಜನ ವಿಶ್ವಾಸ ಇಲ್ಲದ ಪಕ್ಷಕ್ಕೆ ಮತ ಹಾಕಬೇಕಾ? ಎಂದು ಪ್ರಶ್ನಿಸಿದರು. ಈಗಾಗಲೇ ನಿರಂತರವಾಗಿ 2 ವರ್ಷಗಳಿಂದ ಶಿಕ್ಷಕರ ಮೇಲೆ ಅನ್ಯಾಯವಾಗುತ್ತಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು.

ತಲೆ ತಗ್ಗಿಸುವಂತಹ ಕೆಲಸ ಈ ಸರ್ಕಾರದಿಂದ ನಡೆಯುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದರಿಂದ ಶಿಕ್ಷಕರು ಅರ್ಥ ಮಾಡಿಕೊಳ್ಳುತ್ತಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ ಅವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಎಂಎಲ್ಸಿ ಸಲೀಂ ಅಹ್ಮದ್ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಈ ಸಾರಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವುದು..

ಸೋಲಿನ ಭಯದಿಂದ ಹೆದರಿ ಬಸವರಾಜ ಹೊರಟ್ಟಿ ಅವರು ಬಿಜೆಪಿಗೆ ಸೇರಿದ್ದಾರೆ ಎಂಬ ಸಂದೇಶ ಶಿಕ್ಷಕರಿಗೆ ಹೋಗಿದೆ. ಏಳು ಬಾರಿ ಸೆಕ್ಯುಲರ್ ಪಾರ್ಟಿಯಿಂದ ಸ್ಪರ್ಧೆ ಮಾಡಿದ್ದರಿಂದ ಜ್ಯಾತ್ಯಾತೀತ ಮತಗಳು ಅವರಿಗೆ ಹೋಗುತ್ತಿದ್ದವು.

ಆದರೆ, ಇವತ್ತು ಅಧಿಕಾರದ ಆಸೆಯಿಂದ ಚೇರ್‌ಮೆನ್ ಆಗಬೇಕು ಎಂಬ ಆಸೆಯಿಂದ ಅವರು ಬಿಜೆಪಿ ಸೇರಿದ್ದಾರೆ. ಶಿಕ್ಷಕರು ಅರ್ಥ ಮಾಡಿಕೊಳ್ಳುತ್ತಾರೆ. ಬಸವರಾಜ ಗುರಿಕಾರ ಅವರ ಮೇಲೆ ಯಾವುದೇ ಕಳಂಕ ಇಲ್ಲ. ಶಿಕ್ಷಕರು ಬದಲಾವಣೆ ಬಯಸುತ್ತಿದ್ದಾರೆ. ಗುರಿಕಾರ ಈ ಬಾರಿ ವಿಜಯ ಸಾಧಿಸುತ್ತಾರೆ ಎಂದರು.

ಇದನ್ನೂ ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದರ ಬಗ್ಗೆ ವಿಶೇಷ ಅರ್ಥ ಬೇಡ: ಮುಂದೆ ಬೇರೆ ಅವಕಾಶಗಳಿವೆ- ಬಿಎಸ್​ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.