ಹುಬ್ಬಳ್ಳಿ: ನಗರದ ಖ್ಯಾತ ವೈದ್ಯ ದಂಪತಿ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿ ಹಾಗೂ ಪತ್ನಿ ದೂರು- ಪ್ರತಿದೂರು ದಾಖಲಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪತ್ನಿಯ ವಿರುದ್ಧ ಹುಬ್ಬಳ್ಳಿಯ ಖ್ಯಾತ ನ್ಯೂರೋ ಸರ್ಜನ್ ಡಾ.ಕ್ರಾಂತಿಕಿರಣ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಡಾ. ಶೋಭಾ ವಿರುದ್ಧ 17 ಲಕ್ಷ ವಂಚನೆ ಮಾಡಿದ ಆರೋಪದಡಿ ದೂರು ದಾಖಲಿಸಿದ್ದಾರೆ. ಇದಲ್ಲದೆ ಕಳೆದ ವರ್ಷ ಪತ್ನಿಯಿಂದಲೇ ಜೀವ ಬೇದರಿಕೆಯಿದೆ ಎಂದು ನೀಡಿದ್ದರು.
ಪತ್ನಿ ಡಾ. ಶೋಭಾ ಕೂಡ ಪತಿ ವಿರುದ್ಧ ಪ್ರತಿದೂರು ನೀಡಿದ್ದು, ತನ್ನ ಸಹಿ ಇಲ್ಲದೇ ಆಸ್ಪತ್ರೆ ಬ್ಯಾಂಕ್ ಅಕೌಂಟ್ ಚೇಂಜ್ ಮಾಡಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪ್ರಸಿದ್ಧ ಖಾಸಗಿ ಆಸ್ಪತ್ರೆಯನ್ನು ದಂಪತಿ ಕಟ್ಟಿದ್ದು, ಪತಿ ಆಸ್ಪತ್ರೆಯ ಅಧ್ಯಕ್ಷರಾದರೆ, ಪತ್ನಿ ಶೋಭಾ ನಿರ್ದೇಶಕಿಯಾಗಿದ್ರು. ತನ್ನ ಅನುಮತಿಯಿಲ್ಲದೇ ಬ್ಯಾಂಕ್ ಅಕೌಂಟ್ ಚೇಂಜ್ ಮಾಡಿದ್ದಲ್ಲದೆ, ಪತಿಯ ಮೇಲೆ ಜೀವಬೇದರಿಕೆ, ಹಲ್ಲೆ ಆರೋಪದಡಿ ಕೇಸ್ ದಾಖಲಿಸಿದ್ದಾರೆ.
ಕಳೆದ ವರ್ಷ ಡಾ. ಕ್ರಾಂತಿಕಿರಣ ಅವರು ತಮ್ಮ ಪತ್ನಿಗೆ ಅನೈತಿಕ ಸಂಬಂಧವಿದೆ. ಪತ್ನಿ ಹಾಗೂ ಆಕೆಯ ಪ್ರಿಯಕರನಿಂದ ಜೀವ ಬೇದರಿಕೆ ಇದೆ ದೂರು ನೀಡಿದ್ದರು. ಡಾ.ಕ್ರಾಂತಿಕಿರಣ್ 2018ರಲ್ಲಿ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆ ಗಳಿಗೆಯಲ್ಲಿ ಟಿಕೆಟ್ ಮಿಸ್ ಆಗಿತ್ತು. ಸದ್ಯ ಹುಬ್ಬಳ್ಳಿಯಲ್ಲಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯನ್ನ ನಡೆಸುತ್ತಿದ್ದಾರೆ.