ETV Bharat / city

ಅಪ್ಪು ಪ್ರೇರಣೆ.. ಜನ್ಮದಿನದಂದು ನೇತ್ರದಾನಕ್ಕೆ ಸಹಿ ಹಾಕಿದ ಶಾಸಕ ಅಮೃತ್​ ದೇಸಾಯಿ ದಂಪತಿ - ಶಾಸಕರಿಂದ ನೇತ್ರದಾನ

ಮರಣಾನಂತರ ನೇತ್ರದಾನ(eye donation) ಮಾಡುವುದಾಗಿ ಶಾಸಕ ಅಮೃತ್​ ದೇಸಾಯಿ ಹಾಗೂ ಅವರ ಪತ್ನಿ ಪ್ರಿಯಾ ಸಹಿ ಮಾಡಿದ್ದಾರೆ.

eye donate by MLA Amruta desai
ಜನ್ಮದಿನದಂದು ನೇತ್ರದಾನಕ್ಕೆ ಸಹಿ ಹಾಕಿ ಸಾರ್ಥಕತೆ ಮೆರೆದ ಶಾಸಕ ಅಮೃತ ದೇಸಾಯಿ
author img

By

Published : Nov 16, 2021, 7:54 PM IST

Updated : Nov 16, 2021, 8:18 PM IST

ಧಾರವಾಡ: ಪುನೀತ್ ರಾಜ್​​ಕುಮಾರ್​(Puneeth Rajkumar) ಅವರ ಅಕಾಲಿಕ ನಿಧನ ಕೋಟ್ಯಂತರ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ. ನಿಧನದ ಬಳಿಕ ಕುಟುಂಬಸ್ಥರು ಅಪ್ಪುವಿನ ನೇತ್ರದಾನ(eye donation) ಮಾಡಿರುವುದರಿಂದ ಪ್ರೇರೇಪಣೆಗೊಂಡ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್​ ದೇಸಾಯಿ (MLA Amrut Desai) ತಮ್ಮ ಜನ್ಮ ದಿನದಂದು(ಇಂದು) ನೇತ್ರದಾನ ಮಾಡಿದರು.

ಧಾರವಾಡದ ನರೇಂದ್ರ ಕ್ರಾಸ್ ಬಳಿಯಿರುವ ಹಾಲ್ ವೊಂದರಲ್ಲಿ ಅಮೃತ್​ ದೇಸಾಯಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿ, ಬಳಿಕ ಸಭಾ ಕಾರ್ಯಕ್ರಮದಲ್ಲಿ ಮರಣಾನಂತರ ನೇತ್ರದಾನ ಮಾಡುವುದಾಗಿ ಶಾಸಕ ಅಮೃತ್​ ದೇಸಾಯಿ ಹಾಗೂ ಅವರ ಪತ್ನಿ ಪ್ರಿಯಾ ಸಹಿ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಶಾಸಕ ಅಮೃತ್ ದೇಸಾಯಿ ನೇತ್ರದಾನ ಮಾಡಿರುವುದರಿಂದ ಪ್ರೇರೇಪಣೆಗೊಂಡು ಅವರ 210 ಅಭಿಮಾನಿಗಳು ನೇತ್ರದಾನ ಹಾಗೂ 71 ಜನರು ಇಂದು ರಕ್ತದಾನ ಮಾಡಿದ್ದಾರೆ.

ನಟ ಪುನೀತ್‌ ರಾಜ್​​ಕುಮಾರ್​ ನಿಧನದ ನಂತರ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಅದೇ ಮಾದರಿಯಲ್ಲಿ ನಾವು ಸಹ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಅಮೃತ್​ ದೇಸಾಯಿ ಹೇಳಿದರು. ಈ ವೇಳೆ ಶಾಸಕರ ಪತ್ನಿ ಪ್ರಿಯಾ ನೇತ್ರದಾನಕ್ಕೆ ನಿರ್ಧಾರ ಮಾಡಿದ್ದಷ್ಟೇ ಅಲ್ಲದೇ ರಕ್ತದಾನವನ್ನು ಮಾಡಿ ಸಾರ್ಥಕತೆ ಮೆರೆದರು.

ಜನ್ಮದಿನದಂದು ನೇತ್ರದಾನಕ್ಕೆ ಸಹಿ ಹಾಕಿದ ಶಾಸಕ ಅಮೃತ್​ ದೇಸಾಯಿ ದಂಪತಿ

ಇದನ್ನೂ ಓದಿ: ಸದ್ಯದಲ್ಲೇ ರಾಜ್ಯ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ : ಯತ್ನಾಳ್ ಭವಿಷ್ಯ

ಶಾಸಕ ಅಮೃತ್​ ದೇಸಾಯಿ ಅವರು ತಮ್ಮ ಜನ್ಮದಿನವನ್ನು ಅಂಧರ ಬಾಳಿಗೆ ಬೆಳಕಾಗಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಆಚರಿಸಿಕೊಂಡಿದ್ದು ಇತರರಿಗೆ ಮಾದರಿಯಾಗಿದೆ.

Last Updated : Nov 16, 2021, 8:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.