ETV Bharat / city

ಡೈವರ್ಸ್ ನೀಡಿ 52 ವರ್ಷದ ನಂತ್ರ ಒಂದಾದ ಜೋಡಿ.. ಯೌವನದಲ್ಲಿ ದೂರ ದೂರ, ವೃದ್ಧಾಪ್ಯದಲ್ಲಿ ಹೊಸ ಜೀವನ

author img

By

Published : Jun 27, 2022, 12:55 PM IST

ಯೌವನದಲ್ಲಿ ದೂರವಾಗಿ ಇಳಿ ವಯಸ್ಸಿನಲ್ಲಿ ಈ ದಂಪತಿ ಒಂದಾಗಿದ್ದಾರೆ. ಡೈವರ್ಸ್ ನೀಡಿ ಸುಮಾರು 52 ವರ್ಷಗಳ ನಂತ್ರ ಮತ್ತೆ ಒಂದಾಗಿ ಜೀವನ ನಡೆಸಲು ಈ ಜೋಡಿ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

Divorce couple reunited after 52 years in Hubli, Divorce couple reunited in Hubli, Hubli court news, ಹುಬ್ಬಳ್ಳಿಯಲ್ಲಿ 52 ವರ್ಷಗಳ ನಂತರ ಒಂದಾದ ವಿಚ್ಛೇದನ ಪಡೆದ ಜೋಡಿ, ಹುಬ್ಬಳ್ಳಿಯಲ್ಲಿ ಮತ್ತೆ ಒಂದಾದ ವಿಚ್ಛೇದನ ಪಡೆದ ದಂಪತಿ, ಹುಬ್ಬಳ್ಳಿ ಕೋರ್ಟ್ ಸುದ್ದಿ,
ಡೈವರ್ಸ್ ನೀಡಿ 52 ವರ್ಷಗಳ ನಂತ್ರ ಒಂದಾದ ಜೋಡಿ

ಹುಬ್ಬಳ್ಳಿ: ಯೌವನದಲ್ಲಿ ದೂರವಾದವರು ವೃದ್ಧಾಪ್ಯದಲ್ಲಿ ಒಂದಾಗಿದ್ದಾರೆ. ಅದೂ ಸಹ ರಾಜಿ ಪಂಚಾಯ್ತಿ ಮೂಲಕ. 52 ವರ್ಷ ದೂರ ಇದ್ದ ದಂಪತಿಯನ್ನು ಲೋಕ್ ಅದಾಲತ್ ಒಂದು ಮಾಡಿದೆ. ಇಂಥದ್ದೊಂದು ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗಿದೆ ಧಾರವಾಡ ಜಿಲ್ಲೆಯ ಕಲಘಟಗಿ. ಹೀಗೆ ವೃದ್ಧಾಪ್ಯದಲ್ಲಿ ಒಂದಾದ ದಂಪತಿಯ ಹೆಸರು ಬಸಪ್ಪ ಅಗಡಿ (85) ಹಾಗೂ ಕಲ್ಲವ್ವ ಅಗಡಿ(80) ಎಂದು ತಿಳಿದುಬಂದಿದೆ.

ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಈ ದಂಪತಿ 52 ವರ್ಷದ ಹಿಂದೆ ಡೈವರ್ಸ್ ತೆಗೆದುಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಪತಿ ಬಸಪ್ಪ ಅಗಡಿ ಪ್ರತಿ ತಿಂಗಳು ಕಲ್ಲವ್ವಳಿಗೆ ಜೀವನಾಂಶ ನೀಡುತ್ತಿದ್ದರು. ಆದ್ರೆ ಕೆಲ ತಿಂಗಳಿನಿಂದ ಜೀವನಾಂಶ ಕೊಡುವಲ್ಲಿ ಬಸಪ್ಪ ವಿಫಲವಾಗಿದ್ದರು. ಈ ಹಿನ್ನೆಲೆ ಕಲ್ಲವ್ವ ನ್ಯಾಯಾಲಯದ ಮೊರೆ ಹೋಗಿದ್ದರು.

ಓದಿ: ವಿಚ್ಛೇದನ ಬಯಸಿ ಕೋರ್ಟ್ ಮೊರೆ ಹೋಗಿದ್ದ 38 ಜೋಡಿಗಳ ಬಾಳಲ್ಲಿ ಮತ್ತೆ ವಸಂತಗೀತೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸ್ಥಳೀಯ ಹಿರಿಯ ದಿವಾನಿ ನ್ಯಾಯಾಲಯ ರಾಷ್ಟ್ರೀಯ ಮೆಗಾ ಲೋಕ ಅದಾಲತ್​ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿತ್ತು. ಜೀವನಾಂಶ ಕೊಡುವಲ್ಲಿ ವಿಫಲವಾದ ಬಸಪ್ಪ ಅಗಡಿಯನ್ನೂ ನ್ಯಾಯಾಧೀಶರು ಕರೆಯಿಸಿದ್ದರು. ವೃದ್ಧರಾದ ದಂಪತಿ ನ್ಯಾಯಾಲಯದ ಮೆಟ್ಟಿಲು ಹತ್ತಿರೋದನ್ನು ನೋಡಿ ನ್ಯಾಯಾಧೀಶರಿಗೂ ಅಚ್ಚರಿಯಾಯಿತು. ರಾಜಿ ಪಂಚಾಯ್ತಿ ಮೂಲಕ ನ್ಯಾಯಾಧೀಶರು ಈ ದಂಪತಿಯನ್ನು ಒಂದು ಮಾಡಿದ್ದಾರೆ.

ನ್ಯಾಯಾಧೀಶರಾದ ಜಿ.ಆರ್ ಶೆಟ್ಟರ್​ ಅವರಿಂದ ರಾಜಿ ಸಂಧಾನ ನಡೆಯಿತು. ಗಂಡ-ಹೆಂಡತಿ ಇಬ್ಬರನ್ನೂ ಪರಸ್ಪರ ಒಂದುಗೂಡಿಸುವಲ್ಲಿ ನ್ಯಾಯಾಲಯ ಯಶಸ್ವಿಯಾಗಿದೆ. ವಕೀಲರಾದ ಜಿ.ಆರ್ ಗಾಣಗೇರ ಅವರು ವಕಾಲತ್ತು ವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.