ETV Bharat / city

ಕೊರೊನಾ ಇಳಿಮುಖ : 64 ಕೋವಿಡ್ ಕೇಂದ್ರಗಳನ್ನು ಸ್ಥಗಿತಗೊಳಿಸಿದ ಜಿಲ್ಲಾಡಳಿತ - Hubli corona update

2011 ಸೋಂಕಿತರ ಪೈಕಿ ಈವರೆಗೆ 1940 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದವರು ಬರೀ 71 ಜನ ಮಾತ್ರ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಮಹಾನಗರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅತಿ ಹೆಚ್ಚು ಎಂದರೆ 39 ಸೋಂಕಿತರಿದ್ದರೆ, 14 ಜನ ಧಾರವಾಡ ಗ್ರಾಮೀಣ ಭಾಗದಲ್ಲಿದ್ದಾರೆ..

 District administration closed some covid center in Hubli

author img

By

Published : Jun 18, 2021, 3:55 PM IST

ಹುಬ್ಬಳ್ಳಿ : ಕೊರೊನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಇಳಿಮುಖವಾಗುತ್ತಿರುವುದರಿಂದ ಜಿಲ್ಲೆಯಲ್ಲಿನ 84 ಕೋವಿಡ್ ಕೇರ್ ಸೆಂಟರ್​ ಪೈಕಿ 64 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿತ್ತು. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಎಷ್ಟೋ ಜನರು ಅಸುನೀಗಿದ್ದರು.

ಜತೆಗೆ ಹೋಂ ಐಸೋಲೇಷನ್‌ನಲ್ಲಿ ಇರುವವರು ಹೊರಗೆ ಅಲೆದಾಡಿ ಸೋಂಕು ಹೆಚ್ಚಳಕ್ಕೆ ಕಾರಣರಾಗಿದ್ದರು. ಇದನ್ನು ಮನಗಂಡು ಜಿಲ್ಲಾಡಳಿತ ಸೋಂಕಿತರನ್ನು ಹೋಂ ಐಸೋಲೇಶನ್ ಮಾಡದೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ತೆರೆಯಲಾಗಿತ್ತು. ಹುಬ್ಬಳ್ಳಿ-ಧಾರವಾಡ ನಗರ-11, ಧಾರವಾಡ ಗ್ರಾಮೀಣ-10, ಹುಬ್ಬಳ್ಳಿ ಗ್ರಾಮೀಣ-14, ಕಲಘಟಗಿ-12, ಅಣ್ಣಿಗೇರಿ-8, ಕುಂದಗೋಳ-16, ನವಲಗುಂದ -8, ಅಳ್ನಾವರ-5 ಹೀಗೆ ಒಟ್ಟು 84 ಕೇಂದ್ರಗಳನ್ನು ತೆರೆಯಲಾಗಿತ್ತು. ಹೋಂ ಐಸೋಲೇಷನ್‌ನಲ್ಲಿದ್ದ ಕೆಲವರನ್ನು ಈ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಜೊತೆಗೆ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿರಲು ಅವಕಾಶ ಇಲ್ಲದ ಸೌಮ್ಯ ಲಕ್ಷಣಗಳಿರುವ ಸೋಂಕಿತರನ್ನು ಸಹ ದಾಖಲಿಸಲಾಗಿತ್ತು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 2011 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಈಗ ಚಿಕಿತ್ಸೆ ಪಡೆಯುತ್ತಿರುವವರೆಷ್ಟು ?

2011 ಸೋಂಕಿತರ ಪೈಕಿ ಈವರೆಗೆ 1940 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದವರು ಬರೀ 71 ಜನ ಮಾತ್ರ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಮಹಾನಗರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅತಿ ಹೆಚ್ಚು ಎಂದರೆ 39 ಸೋಂಕಿತರಿದ್ದರೆ, 14 ಜನ ಧಾರವಾಡ ಗ್ರಾಮೀಣ ಭಾಗದಲ್ಲಿದ್ದಾರೆ.

ಅಣ್ಣಿಗೇರಿ-8, ಕುಂದಗೋಳ-7, ನವಲಗುಂದ- 3 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ 20 ಕೋವಿಡ್ ಕೇರ್ ಸೆಂಟರ್ ಬಿಟ್ಟು ಉಳಿದ 64 ಕೇಂದ್ರಗಳನ್ನು ಮುಚ್ಚಲಾಗಿದೆ. ಒಂದು ವೇಳೆ ಕೋವಿಡ್ ಕೇರ್ ಸೆಂಟರ್ ಮತ್ತೆ ಬೇಕೆನಿಸಿದರೆ ಪ್ರಾರಂಭಿಸಲಾಗುವುದು. ಆದರೆ, ಸದ್ಯ ಇವುಗಳನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.