ETV Bharat / city

ಸರ್ಕಾರದೊಂದಿಗೆ ಪ್ರತಿಪಕ್ಷದವರೂ ಸೇರಿ ಮೂರು ಸಾವಿರ ಮಠ ನಾಶ ಮಾಡಿದ್ದಾರೆ: ದಿಂಗಾಲೇಶ್ವರ ಸ್ವಾಮೀಜಿ - hubli matt latest issue

ಉನ್ನತ ಮಟ್ಟದ ಸಮಿತಿಯವರು ಮೂರು ಸಾವಿರ ಮಠವನ್ನ ನಾಶ ಮಾಡಿದ್ದಾರೆ. ಕೆಎಲ್‌ಇ ಸಂಸ್ಥೆಗೆ ನೀಡಿದ ಮೂರು ಸಾವಿರ ಮಠದ ಆಸ್ತಿಯನ್ನ, ಮಠಕ್ಕೆ ಮರಳಿಸಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.

dingaleshwar swamiji outrage against government
ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ
author img

By

Published : Jan 25, 2021, 1:58 PM IST

ಹುಬ್ಬಳ್ಳಿ:. ಕೆಎಲ್‌ಇ ಸಂಸ್ಥೆಗೆ ನೀಡಿದ ಮೂರು ಸಾವಿರ ಮಠದ ಆಸ್ತಿಯನ್ನ, ಮಠಕ್ಕೆ ಮರಳಿಸಬೇಕು. ಇಲ್ಲವಾದ್ರೆ ಬರುವ ದಿನಗಳಲ್ಲಿ ಇದರ ದುಃಖವನ್ನ ನೀವು ಅನುಭವಿಸುತ್ತಿರಿ ಎಂದು ಬಾಲೇಹೊಸೂರಿನ‌ ದಿಂಗಾಲೇಶ್ವರ ಶ್ರೀಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ
ನಗರಲ್ಲಿಂದು ಮಾತನಾಡಿದ ಅವರು, ಉನ್ನತ ಮಟ್ಟದ ಸಮಿತಿಯವರು ಮೂರು ಸಾವಿರ ಮಠವನ್ನ ನಾಶ ಮಾಡಿದ್ದಾರೆ. ಉನ್ನತ ಮಟ್ಟದ ಸಮಿತಿಗೆ ನಾಚಿಗೆಯಾಗಬೇಕು, ನಿಮ್ಮ ಮನೆತನಕ್ಕೆ ಸಂಬಂಧಿಸಿದ ಆಸ್ತಿ ಇರಲ್ಲಿಲ್ಲವೇನು? ಆ ಆಸ್ತಿಯಲ್ಲಿ ನೀವು ಮೆಡಿಕಲ್ ‌ಕಾಲೇಜು ಕಟ್ಟಿಕೊಳ್ಳಬೇಕಿತ್ತು. ನಿಮಗೆ ತಾಕತ್ತಿದ್ದರೆ ಬಹಿರಂಗವಾಗಿ ಬಂದು ಅಪ್ರಚಾರ ಮಾಡಿ. ನನ್ನ ಬಗ್ಗೆ ಅಪಪ್ರಚಾರ ಮಾಡುವವರಿಗೆ ಪಂಥಾಹ್ವಾನ ಕೊಡ್ತೇನೆ, ನಾನು ಎಲ್ಲವನ್ನೂ ಸಾಬೀತುಪಡಿಸುತ್ತೇನೆ. ಎಲ್ಲದಕ್ಕೂ ನಾನು ಸಿದ್ಧನಿದ್ದೇನೆ. ಆಗಿದ್ದಾಗಲಿ ಎಂದು ಮಠದ ಉನ್ನತ ಮಟ್ಟದ ಸಮಿತಿಗೆ ಶ್ರೀಗಳು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ.
ಉನ್ನತ ಮಟ್ಟದ ಸಮಿತಿಯಲ್ಲಿ ಉಸ್ತುವಾರಿ ಮಂತ್ರಿಗಳಿದ್ದಾರೆ, ಗೃಹ ಮಂತ್ರಿಗಳಿದ್ದಾರೆ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಇದ್ದು, ಇವರೆಲ್ಲಾ ಸೇರಿ ಮೂರು ಸಾವಿರ ಮಠದ ಅಸ್ತಿಯನ್ನ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದ್ದಾರೆ. ಮಠದ ಆಸ್ತಿ ಹಾಳಾಗಲಿಕ್ಕೆ ಪ್ರತಿಪಕ್ಷದವರು ಸಹಕಾರ ಕೊಡ್ತಾ ಇದ್ದಾರೆ. ಇದು ತಪ್ಪೆಂದು ನಾನು ಹೇಳ್ತಿದ್ದೇನೆ. ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರು ಇರುವವರು ಸುಪ್ರೀಂ ಕೋರ್ಟ್‌ನ ಆದೇಶವನ್ನ ತಿರುಚಿದ್ದಾರೆ. ಆದೇಶ ತಿದ್ದುಪಡಿ ಮಾಡಿ ಆಸ್ತಿ ಕೊಡಿಸುವ ಮುಂದಾಳತ್ವವನ್ನ ವಹಿಸುವುದು ಸರಿನಾ..? ಈಗಿರುವ ಸರ್ಕಾರದಲ್ಲಿ ಬಹಳ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಈ ಕೆಲಸ ಮಾಡಿದ್ದಾರೆನ್ನುವುದಕ್ಕೆ ಜನ್ರು ಇದಕ್ಕೆ ವಿರೋಧ ಮಾಡಲು ಹೆದರುತ್ತಿದ್ದಾರೆ. ಜನರಲ್ಲಿ ಇವರು ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದರು.
ಒಂದು ಪಕ್ಷದವರು ತಪ್ಪು ಮಾಡಿದಾಗ ಪ್ರತಿಪಕ್ಷದವರು ಮಾತನಾಡುತ್ತಾರೆ. ಆದ್ರೆ ಇವರು ಈಗ ಏಕೆ ಬಾಯಿ ಮುಚ್ಚಿ ಕುಳಿತಿದ್ದಾರೆ? ಯಾಕಂದ್ರೆ ಈ ಆಸ್ತಿ ಹೊಡೆಯಲು ಇವರೆಲ್ಲರೂ ಶಾಮಿಲಾಗಿದ್ದಾರೆ. ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಕಾಂಗ್ರೆಸ್ ನಾಯಕ ವೀರಣ್ಣ‌ ಮತ್ತಿಕಟ್ಟಿ, ಉಳಿದವರು ಎಲ್ಲರೂ ಬಿಜೆಪಿಯವರೇ. ಪ್ರಭಾಕರ್ ಕೋರೆ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಶಂಕರಣ್ಣ ಮುನವಳ್ಳಿ, ಮೋಹನ‌ ಲಿಂಬಿಕಾಯಿ ಇವರು ಎಲ್ಲರೂ ಬಿಜೆಪಿಯವರೇ. ಈ ಎಲ್ಲರೂ ಉನ್ನತ ಮಟ್ಟದ ಸಮಿತಿಯಲ್ಲಿದ್ದಾರೆ. ಇವರು ಎಲ್ಲರೂ ಸೇರಿ ಮೂರು ಸಾವಿರ ಮಠ ಬೆಳೆಸಬೇಕಿತ್ತು. ಆದ್ರೆ ಇವರು 500 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನ ಬೇಕಾಬಿಟ್ಟಿಯಾಗಿ ಕೊಟ್ಟಿದ್ದಾರೆ. ಇದಕ್ಕೆ ಇವರು ಎಲ್ಲರೂ ಉತ್ತರ ಕೊಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.
ಬಸವರಾಜ ಬೊಮ್ಮಯಿಯವರು ನನ್ನಿಂದ ಬಹಳಷ್ಟು ಲಾಭವನ್ನ ತೆಗೆದುಕೊಂಡು ಹೋಗಿದ್ದಾರೆ. ಆದ್ರೆ ನಾನೇ ಮೂರು ಸಾವಿರ ಮಠಕ್ಕೆ ಒಳಗಡೆ ಹೋಗದಂತೆ ಪೊಲೀಸ್ ಇಲಾಖೆಯನ್ನ ಬಂದೋಬಸ್ತ್‌ಗೆ ನಿಲ್ಲಿಸುತ್ತಾರೆ. ನಾನು ಯಡಿಯೂರಪ್ಪನವರಿಗೆ ನೇರವಾಗಿ ಹೇಳ್ತೆನಿ, ಗೃಹ ಖಾತೆಯನ್ನ ಯೋಗ್ಯ ವ್ಯಕ್ತಿಗೆ ಕೊಡಬೇಕು. ಬೊಮ್ಮಾಯಂತವರ ಕೈಯಲ್ಲಿ ಕೊಡಬಾರದು, ಯಾಕಂದ್ರೆ ಅವರು ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ‌. ಯಡಿಯೂರಪ್ಪನವರ ಜೊತೆಗೆ ನನಗೆ 20 ವರ್ಷದ ಸಂಬಂಧ ಇದೆ. ಯಡಿಯೂರಪ್ಪನವರಿಗೆ ಒಂದು ಬದ್ಧತೆ ಇದೆ, ಇವರೆಲ್ಲರನ್ನು ಕಿವಿ ಹಿಂಡಿ ಸರಿಯಾದ ಮಾರ್ಗದಲ್ಲಿ ತರುವ ಕೆಲಸ ಮಾಡಬೇಕು‌ ಎಂದ್ರು.
ಎಲ್ಲರಿಗೂ ನೇರವಾಗಿ ಮಾತನಾಡಲು ಆಹ್ವಾನ ‌ಕೊಡ್ತೇನೆ, ನಿಮಗೆಲ್ಲರಿಗೂ ಪ್ರಾಮಾಣಿಕತೆ ಇದ್ದರೆ, ಮಠಗಳ ಬಗ್ಗೆ, ನಾಡಿನ ಬಗ್ಗೆ, ಅಭಿಮಾನ ಇದ್ದರೆ ನೇರವಾಗಿ ಮಾತನಾಡಲಿಕ್ಕೆ ಬರಬೇಕು. ಇದಕ್ಕೆ ಯಾವುದೇ ವೇದಿಕೆ ಬೇಡ, ನೇರವಾಗಿ ಮಾತನಾಡಲಿಕ್ಕೆ ವಿಧಾನಸೌಧಕ್ಕೂ ಬರ್ತೀನಿ, ಮಠಕ್ಕೆ ಕರೆದ್ರೆ ಮಠಕ್ಕೂ ಬರ್ತೀನಿ. ಇದು ಇಷ್ಟಕ್ಕೆ ಮುಗಿಯುವುದಿಲ್ಲ, ಇದು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ‌ ಸ್ವರೂಪ ಪಡೆದುಕೊಳ್ಳುತ್ತದೆ. ರಾಜಕಾರಣಿಗಳು ಎಲ್ಲರೂ ಸೇರಿ ಮಠವನ್ನ ಹಾಳು ಮಾಡುತ್ತಿದ್ದಾರೆ. ಮಠದ ರಕ್ಷಣೆ ಮಾಡಲು ನಾವು ಬಂದಿದ್ದೇವೆ. ನಮಗೆ ರಕ್ಷಣೆ ಬೇಕು, ಇಲ್ಲಿ ಮಠ ಲೂಟಿ ಮಾಡುವವರಿಗೆ ರಕ್ಷಣೆ ಕೊಡಬಾರದು ಎಂದು ಸ್ವಾಮೀಜಿ ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.