ಧಾರವಾಡ: ಕೃಷಿಯಲ್ಲಿ ದಿನಕ್ಕೊಂದು ಆವಿಷ್ಕಾರ ಮಾಡಲಾಗುತ್ತದೆ. ಬಿತ್ತನೆ ಹಾಗೂ ಕೊಯ್ಲು ಮಾಡುವುದಕ್ಕೆ ನವನವೀನ ಯಂತ್ರಗಳು ಬಂದಿವೆ. ಅದೇ ರೀತಿ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸಲು ರೈತರು ಡ್ರೋನ್ ಮೊರೆ ಹೋಗಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಈರಣ್ಣ ವಡ್ಡಟ್ಟಿ ಎಂಬ ರೈತರೊಬ್ಬರು ತಮ್ಮ ನಾಲ್ಕು ಎಕರೆ ಜಮೀನಿನ ಹೆಸರು ಬೆಳೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪಡಿಸಿ ತಂತ್ರಜ್ಞಾನದ ಕೃಷಿಗೆ ಮುಂದಾಗಿದ್ದಾರೆ. ಧಾರವಾಡದಲ್ಲಿ ಬಾಡಿಗೆ ಡ್ರೋನ್ ಪಡೆದುಕೊಂಡು ಬಂದ ರೈತ ಇಂಥದ್ದೊಂದು ಪ್ರಯತ್ನ ಮಾಡಿದ್ದಾರೆ. ಈ ಡ್ರೋನ್ ಏಳು ನಿಮಿಷಕ್ಕೆ ಒಂದು ಎಕರೆಗೆ ಕ್ರಿಮಿನಾಶಕ ಸಿಂಪಡಿಸುತ್ತದೆ.
ಈರಣ್ಣ ಅವರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆಗೆ ಡ್ರೋನ್ ಮುಖಾಂತರವೇ ಕ್ರಿಮಿನಾಶಕ ಸಿಂಪಡಿಸಿದ್ದಾರೆ. ಈ ಕ್ರಿಮಿನಾಶಕ ಸಿಂಪಡಣೆ ಮೂಲಕ ಸಮಯ ಉಳಿತಾಯ ಅಷ್ಟೇ ಅಲ್ಲ, ಆಳುಗಳಿಗೆ ಕೊಡಬೇಕಾದ ಹೆಚ್ಚುವರಿ ಹಣವೂ ಸಹ ರೈತನಿಗೆ ಉಳಿತಾಯವಾಗುತ್ತೆ. ಇದರಿಂದ ಹಲವು ರೈತರು ತಂತ್ರಜ್ಞಾನದ ಮೊರೆ ಹೋಗಿದ್ದು, ಮುಂದಿನ ದಿನಗಳಲ್ಲಿ ಡ್ರೋನ್ ಮೂಲಕವೇ ಕ್ರಿಮಿನಾಶಕ ಸಿಂಪಡಣೆ ಮಾಡುವ ಉತ್ಸಾಹ ಹೊಂದಿದ್ದಾರೆ.
ಇದನ್ನೂ ಓದಿ : 407 ಎಕರೆ ಜಮೀನು ವಶಕ್ಕೆ ಮುಂದಾದ ಕೆಐಡಿಬಿ.. ಭೂಸ್ವಾಧೀನ ಕೈಬಿಡುವಂತೆ ರೈತರ ಒತ್ತಾಯ