ETV Bharat / city

ಕೊರೊನಾ ಸೋಂಕಿತರಿಗಿಂತ ಗುಣಮುಖರೇ ಹೆಚ್ಚು: ಕಿಮ್ಸ್​ನಲ್ಲಿ ಶೇ 50ರಷ್ಟು ಬೆಡ್ ಖಾಲಿ-ಖಾಲಿ - Hubli Latest News

ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದ್ದು, ಜಿಲ್ಲೆಯ ಜನರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.

corona-infected-people-less-in-dharwad-district
ಕೊರೊನಾ ಸೋಂಕಿತರಿಗಿಂತ ಗುಣಮುಖರೇ ಹೆಚ್ಚು: ಕಿಮ್ಸ್​ನಲ್ಲಿ ಶೇ 50ರಷ್ಟು ಬೆಡ್ ಖಾಲಿ-ಖಾಲಿ
author img

By

Published : Nov 2, 2020, 3:44 PM IST

ಹುಬ್ಬಳ್ಳಿ: ಇಷ್ಟು ದಿನ ಕೊರೊನಾದ ಆತಂಕದಲ್ಲಿದ್ದ ಜನರಿಗೆ ಈಗ ಗುಡ್​ನ್ಯೂಸ್ ಸಿಕ್ಕಿದೆ. ಧಾರವಾಡ ಜಿಲ್ಲೆಯಲ್ಲಿ ದಿನಕ್ಕೆ ದ್ವಿಶತಕ, ತ್ರಿ‌ಶತಕ ಭಾರಿಸುತ್ತಿದ್ದ ಕೊರೊನಾ ಹಾವಳಿ ತಗ್ಗಿದ್ದು, ಅಕ್ಟೋಬರ್‌ನಲ್ಲಿ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಅಧಿಕವಾಗಿದೆ.

ಕೊರೊನಾ ಸೋಂಕಿತರ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡ ಪರಿಣಾಮ ಕಿಮ್ಸ್ ಆಸ್ಪತ್ರೆಯಲ್ಲಿ ಶೇ 50ರಷ್ಟು ಬೆಡ್‌ಗಳು ಖಾಲಿಯಾಗಿವೆ. ಅಲ್ಲದೇ, ಹುಬ್ಬಳ್ಳಿಯ ಆಯುರ್ವೇದ ಆಸ್ಪತ್ರೆಗಳು ಸೇರಿದಂತೆ ಕೆಲ ಕೋವಿಡ್‌ ಕೇರ್‌ ಕೇಂದ್ರಗಳನ್ನು ರದ್ದು ಮಾಡಲಾಗಿದೆ.

ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ 6,101 ಸೋಂಕಿತರು ಪತ್ತೆಯಾಗಿದ್ದು, 5,587 ಜನರು ಗುಣಮುಖರಾಗಿದ್ದಾರೆ. ಅಕ್ಟೋಬರ್‌ನಲ್ಲಿ 3,117 ಸೋಂಕಿತರು ಪತ್ತೆಯಾಗಿದ್ದು, 5,149 ಜನ ಗುಣಮುಖರಾಗಿದ್ದಾರೆ.

ಮಾರ್ಚ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾದ ಬಳಿಕ ನಿತ್ಯ 10–20 ಪ್ರಕರಣಗಳು ವರದಿಯಾಗುತ್ತಿದ್ದವು. ಕ್ರಮೇಣ ಈ ಸಂಖ್ಯೆ ಹೆಚ್ಚಳವಾಗಿತ್ತು. ಒಂದೇ ದಿನ 300ರಿಂದ 400 ಪ್ರಕರಣಗಳು ವರದಿಯಾದ ಉದಾಹರಣೆಯೂ ಇದೆ. ಆದರೆ, ಕಳೆದ ಎರಡು ತಿಂಗಳುಗಳಿಂದ ಸೋಂಕಿತರ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದ್ದು, ಜಿಲ್ಲೆಯ ಜನರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.