ಹುಬ್ಬಳ್ಳಿ : ಸೇವಾ ಭಾರತಿ ಟ್ರಸ್ಟ್ ಹಾಗೂ ಹು-ಧಾ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಹಲವೆಡೆ ಕೋವಿಡ್ 19 ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಬಾದಾಮಿ ನಗರದ ಬಾಲಭವನದಿಂದ ರಮೇಶ ಭವನ ಸರ್ಕಲ್, ಕೇಶ್ವಾಪೂರ ಸರ್ಕಲ್, ಕುಸುಗಲ್ ರಸ್ತೆ ಮಾರ್ಗವಾಗಿ ಬಾದಾಮಿ ನಗರದ ಸುತಮುತ್ತಲಿನ ಕಾಲೋನಿಗಳಲ್ಲಿ ಸಂಚರಿಸಿ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ದಿಟ್ಟ ಕ್ರಮಗಳ ಕುರಿತು ಜನಜಾಗೃತಿ ಮೂಡಿಸಲಾಯಿತು.
ಸೇವಾ ಭಾರತಿ ಪ್ರಮುಖ ಕಿರಣ, ವಿಶ್ವನಾಥ, ಬಿಜೆಪಿ ಪ್ರಮುಖರಾದ ಈಶ್ವರಗೌಡ ಪಾಟೀಲ್, ವೀರೇಶ ಉಪ್ಪಿನ್, ಬೀರಪ್ಪ ಖಂಡೇಕಾರ, ಪ್ರವೀಣ ಹುರಳಿ, ಮಾರುತಿ ಅವರಸಂಗ ಮೇಘರಾಜ ಕೇರೂರ, ಈಶ್ವರ ಅರಳಿಕಟ್ಟಿ ಬಸವರಾಜ ಹಳ್ಯಾಳ, ಎಲ್ಲಪ್ಪ ಈರನಟ್ಟಿ ಪಾಲಿಕೆ ಅಧಿಕಾರಿ ಹಾವೇರಿ ಮುಂತಾದವರು ಭಾಗವಹಿಸಿದ್ದರು.