ETV Bharat / city

ಹವಾಮಾನ ವೈಪರೀತ್ಯ: ಹುಬ್ಬಳ್ಳಿಯಲ್ಲಿ ತಡವಾಗಿ ಲ್ಯಾಂಡ್‌ ಆದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ

ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಲ್ಯಾಂಡಿಂಗ್‌ ಸಮಸ್ಯೆ ಎದುರಿಸಿತು.

Landing problem for cm Bommai traveling plane in Hubbali
ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ
author img

By

Published : Dec 10, 2021, 8:20 AM IST

Updated : Dec 10, 2021, 8:50 AM IST

ಹುಬ್ಬಳ್ಳಿ: ಹವಾಮಾನ ವೈಪರೀತ್ಯ ಉಂಟಾದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪ್ರಯಾಣಿಸುತ್ತಿದ್ದ ಇಂಡಿಗೋ 6E 7227 ವಿಮಾನ 26 ನಿಮಿಷಗಳ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶಿಸಿದೆ.

ಸಿಎಂ ಬೊಮ್ಮಾಯಿ ಹಾಗು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಈ ವಿಮಾನದಲ್ಲಿದ್ದರು. ದಟ್ಟ ಮಂಜು ಆವರಿಸಿದ ಕಾರಣ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ವಿಮಾನ ಲ್ಯಾಂಡಿಂಗ್‌ಗೆ ಕ್ಲಿಯರೆನ್ಸ್‌ ಸಿಕ್ಕಿರಲಿಲ್ಲ. ಹೀಗಾಗಿ, ವಿಮಾನ ಆಗಸದಲ್ಲೇ ಸುತ್ತು ಹೊಡೆಯುತ್ತಿತ್ತು.

Landing problem for cm Bommai traveling plane in Hubbali
ವಿಮಾನ ಪ್ರಯಾಣಿಸಿದ ಮಾರ್ಗ

ಬೆಳಗ್ಗೆ 7.30ಕ್ಕೆ ವಿಮಾನ ಲ್ಯಾಂಡಿಂಗ್‌ ಆಗಬೇಕಿತ್ತು.

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಮ ನಿರ್ದೇಶಿತರಿಗೆ ಮತದಾನ ಮಾಡದಂತೆ ಸೂಚನೆ: ಡಿಕೆಶಿ

Last Updated : Dec 10, 2021, 8:50 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.