ETV Bharat / city

'ಸಿದ್ದರಾಮಯ್ಯ ಹಣ ಹಂಚಿದ ಅನುಭವದಲ್ಲಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ' - opposition leader siddaramaiah

ಸಿದ್ದರಾಮಯ್ಯ ಯಾವಾಗ ಪ್ರತಿಪಕ್ಷದಲ್ಲಿ ಇರುತ್ತಾರೋ ಈ ಡೈಲಾಗ್ ಫಿಕ್ಸ್. ಅವರ ಸ್ಟ್ಯಾಂಡರ್ಡ್ ಟೆಂಪ್ಲೆಟ್ ಡೈಲಾಗ್ ನಿರಂತರವಾಗಿರುತ್ತದೆ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

CM Basavaraj Bommai
ಬಸವರಾಜ ಬೊಮ್ಮಾಯಿ
author img

By

Published : Oct 22, 2021, 12:26 PM IST

ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಣ ಹಂಚಿದ ಅನುಭವದ ಮೇಲೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ

ನಗರದಲ್ಲಿಂದು ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಹಣ ಹಂಚಿಕೆ ಮಾಡಿದೆ ಎಂಬ ಸಿದ್ಧರಾಮಯ್ಯ ಆರೋಪಕ್ಕೆ ತಿರುಗೇೆಟು ನೀಡಿದರು. ಅದು ಅವರ ಅನುಭವ. ನಂಜನಗೂಡು, ಗುಂಡ್ಲುಪೇಟೆ ಕುಂದಗೋಳದಲ್ಲಿ ಸಿದ್ದರಾಮಯ್ಯ ಏನು ಮಾಡಿದ್ದಾರೆ ಗೊತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಲಸಿಕಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, 100 ಕೋಟಿ ಡೋಸ್​​ ಲಸಿಕೆ ನೀಡಿದ್ದೇವೆ. 100 ಕೋಟಿ ಲಸಿಕೆ ಯಾರು ಯಾರು ತೆಗೆದುಕೊಂಡಿದ್ದಾರೆ ಅವರು ಎದ್ದು ನಿಂತು ಹೇಳಬೇಕಾ?. ಹೀಗೆ ಕೇಳ್ತಾರೆ ಅಂತಾನೆ ಕೇಂದ್ರ ಸರ್ಕಾರ ಮೊದಲೇ ರಿಜಿಸ್ಟರ್ ಮಾಡಿಕೊಂಡು ಲಸಿಕೆ ಹಾಕಿಸಿದೆ ಎಂದರು.

ಇದನ್ನೂ ಓದಿ: ಕೇವಲ 29 ಕೋಟಿ ಜನರಿಗೆ ಮಾತ್ರ 2 ಡೋಸ್ ಲಸಿಕೆ ನೀಡಲಾಗಿದೆ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.