ಹುಬ್ಬಳ್ಳಿ : ಕೋವಿಡ್ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಕೆಲಸಗಳೆಲ್ಲವೂ ಸ್ಥಗಿತವಾಗಿದ್ದವು. ಈಗಷ್ಟೇ ಪುನಾರಂಭವಾಗಿ ಚೇತರಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ್ ಬಂದ್ಗೆ ಕರೆ ನೀಡಿರುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಈಗಾಗಲೇ ನಾನು ಅಧಿವೇಶನದಲ್ಲಿ ಶಾಸಕ ಬಸನಗೌಡ ಯತ್ನಾಳ್ ಇದ್ದಾಗಲೇ ಉತ್ತರ ನೀಡಿದ್ದೇನೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ಪ್ರಧಾನಮಂತ್ರಿಗಳು ದೂರದೃಷ್ಟಿ ಇಟ್ಟುಕೊಂಡು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ. ಇದು ಅತ್ಯಂತ ಚರ್ಚಿತ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು, ಶ್ರೇಷ್ಠ ತಜ್ಞರ ಜತೆಗೆ ಚರ್ಚೆ ಮಾಡಿ ಮುಂದಿನ ಪೀಳಿಗೆಗೆ ಯಾವ ರೀತಿಯ ಶಿಕ್ಷಣ ಇರಬೇಕು ಎನ್ನುವುದರ ಕುರಿತು ಇದು ದಿಟ್ಟ ಪ್ರಯತ್ನವಾಗಿದೆ. ಬದಲಾವಣೆ ಬಂದಾಗ ಹೀಗೆಲ್ಲ ವಿರೋಧ ವ್ಯಕ್ತವಾಗುವುದು ಸಹಜ. ಭಾರತೀಯರಿಗಾಗಿ, ಭಾರತೀಯರಿಗೊಸ್ಕರ ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಇದನ್ನೂ ಓದಿ: ಫ್ಲೈಓವರ್ ನಿರ್ಮಾಣಕ್ಕೆ ಅಪಸ್ವರ, ಶಾಸಕ ಬೆಲ್ಲದ್ ಹಾಗೂ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ - ಪ್ರಲ್ಹಾದ್ ಜೋಶಿ