ETV Bharat / city

ಕೊರೊನಾ ಸೋಂಕಿತರಿರುವ ಕಿಮ್ಸ್ ಆಸ್ಪತ್ರೆ ಬಳಿಯ ಚೆಕ್​ ​​​ಪೋಸ್ಟ್ ತೆರವು: ಜನರಲ್ಲಿ ಆತಂಕ

ಕೊರೊನಾ ಸೋಂಕಿತರಿರುವ ಕಿಮ್ಸ್ ಆಸ್ಪತ್ರೆಯ ಸಮೀಪ ವಾಹನ ಮತ್ತು ಸವಾರರ ತಪಾಸಣೆಗಾಗಿ ಹಾಕಲಾಗಿದ್ದ ಚೆಕ್​ ಪೋಸ್ಟ್​​ ತೆರವು ಮಾಡಲಾಗಿದೆ.

author img

By

Published : May 9, 2020, 4:30 PM IST

Check post clearance near Kim's Hospital
ಚೆಕ್​​​​ಪೋಸ್ಟ್ ತೆರವು ಮಾಡುತ್ತಿರುವುದು

ಹುಬ್ಬಳ್ಳಿ: ಲಾಕ್​ಡೌನ್ ಸಡಿಲಿಕೆ ಮಾಡದಿದ್ದರೂ ಅಶೋಕನಗರ ಸೇತುವೆ ಸಮೀಪ ಒಂದು ತಿಂಗಳಿಂದ ಹಾಕಲಾಗಿದ್ದ ಚೆಕ್​ ​ಪೋಸ್ಟ್ ತೆರುವುಗೊಳಿಸಲಾಗಿದೆ. ಇಲ್ಲಿಂದ 1 ಕಿ.ಮೀ. ಅಂತರದಲ್ಲಿ ಕಂಟೇನ್ಮೆಂಟ್ ಪ್ರದೇಶವಿದೆ.

ಅಶೋಕನಗರ ಸೇತುವೆ ಮುಖಾಂತರ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೀಗಾಗಿ ವಾಹನಗಳ ತಪಾಸಣೆ ಮತ್ತು ಥರ್ಮಲ್ ಸ್ಕ್ರೀನಿಂಗ್​ ಮಾಡಲಾಗುತ್ತಿತ್ತು. ಕಂಟೇನ್ಮೆಂಟ್ ಪ್ರದೇಶದಲ್ಲಿ 21 ದಿನದಿಂದ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಚೆಕ್​ ​ಪೋಸ್ಟ್ ಇಂದು ತೆರುವುಗೊಳಿಸಲಾಯಿತು.

ಚೆಕ್​​ ​​ಪೋಸ್ಟ್ ತೆರವು

ಅಲ್ಲದೆ ಕಿಮ್ಸ್​​​​ನ ಪಿಎಂಎಸ್​​​ಎಸ್​​​ವೈ ಆಸ್ಪತ್ರೆಯ ಕೂಗಳತೆ ದೂರದಲ್ಲಿರುವ ಮತ್ತೊಂದು ಚೆಕ್​​ ಪೋಸ್ಟ್ ತೆರುವುಗೊಳಿಸಲಾಗಿದೆ. ಇದರಿಂದ ಕಿಮ್ಸ್ ಆಸ್ಪತ್ರೆ ಹಿಂಭಾಗದಿಂದ ಯಾರು ಬೇಕಾದರೂ ಆಸ್ಪತ್ರೆ ಪ್ರವೇಶಿಸಬಹುದು. ಅಲ್ಲದೆ ಆಸ್ಪತ್ರೆ ಹಿಂಭಾಗದಲ್ಲಿ ಕೊರೊನಾ ಸೋಂಕಿತರನ್ನು ಇರಿಸಲಾಗಿದೆ.

ದಿನ ನೂರಾರು ಮಂದಿ ಕೊರೊನಾ ಪರೀಕ್ಷೆಗೆ ಆಗಮಿಸುತ್ತಾರೆ. ಕಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿ ಚೆಕ್​ ​ಪೋಸ್ಟ್ ತೆರುವುಗೊಳಿಸಿದ ಪರಿಣಾಮ ಜನರಲ್ಲಿ ಆತಂಕ ಮೂಡಿಸಿದೆ. ಧಾರವಾಡ ಜಿಲ್ಲೆಯಲ್ಲಿ ಈವರೆಗೆ 11 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 7 ಮಂದಿ ಗುಣಮುಖರಾಗಿದ್ದಾರೆ. 5 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.