ಹುಬ್ಬಳ್ಳಿ: ಬೈಕ್ ಸವಾರನೊಬ್ಬನಿಗೆ ಕಾರಿನ ಡೋರ್ ತಾಗಿದ ಪರಿಣಾಮ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ. ಇಲ್ಲಿನ ಗಬ್ಬೂರಿನ ಬಳಿ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 20 ವರ್ಷದ ಅಬ್ದುಲ್ ರಜಾಕ್ ಅಮೀನಸಾಬನವರ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಾರುಕಟ್ಟೆಗೆ ತೆರಳುವ ವೇಳೆ ಪಕ್ಕದಲ್ಲಿದ್ದ ಕಾರಿನ ಡೋರ್ ಬೈಕ್ಗೆ ತಾಗಿದ ಪರಿಣಾಮ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಇನ್ನು ಮೃತದೇಹವನ್ನು ಕಿಮ್ಸ್ನ ಶವಾಗಾರಕ್ಕೆ ರವಾನಿಸಲಾಗಿದೆ.