ಧಾರವಾಡ: ಲೋಕಸಭಾ ಚುನಾವಣಾ ಹಿನ್ನೆಲೆ ಮತದಾರರಲ್ಲಿ ಜಾಗೃತಿ ಮೂಡಿಸಲು ಬೈಕ್ ಜಾಥಾವನ್ನು ಜಿಲ್ಲಾ ಸ್ವೀಪ್ ಸಮಿತಿ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್, ಧಾರವಾಡ ಬೆಸುಗೆ ಗೆಳೆಯರ ಬಳಗದ ಸಹಯೋಗದಲ್ಲಿ ನಡೆಸಲಾಯಿತು.
ಎಪ್ರಿಲ್ 23 ರಂದು ತಪ್ಪದೆ ಮತದಾನ ಮಾಡಿ ಎಂಬ ಸಂದೇಶದೊಂದಿಗೆ ವಿಶೇಷವಾಗಿ ಅಲಂಕರಿಸಿದ್ದ ವಾಹನವನ್ನು ಕಲಾವಿದ ಮಂಜುನಾಥ ಹಿರೇಮಠ ಚಲಾಯಿಸಿದರು. ಉಳಿದ ಎಲ್ಲಾ ವಾಹನಗಳನ್ನು ಮಹಿಳೆಯರೇ ಮುನ್ನಡೆಸಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ , ಜಿಪಂ ಸಿಇಒ ಡಾ.ಬಿ.ಸಿ.ಸತೀಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಜಾನನ ಮನ್ನಿಕೇರಿ ಹಸಿರು ನಿಶಾನೆ ತೋರಿ ಜಾಥಾಕ್ಕೆ ಚಾಲನೆ ನೀಡಿದರು.
ಮತದಾನ ಜಾಗೃತಿ ಕಲಾ ತಂಡದ ಎಫ್.ಬಿ. ಕಣವಿ, ಸಿ.ಎಂ ಕೆಂಗಾರ, ಬಿ.ಎನ್ ಗೊರವರ, ಜಿ.ಟಿ.ದೊಡಮನಿ , ಪ್ರಮಿಳಾ ಜಕ್ಕಣ್ಣವರ, ಕೀರ್ತಿವತಿ ವ್ಹಿ.ಎನ್, ಭಾರತಿ ಮನ್ನಿಕೇರಿ , ಎಂ ಆರ್.ಪಾಲ್ತಿ, ಜೆ.ಎಂ.ಗಾಮನಗಟ್ಟಿ, ಮಂಜುನಾಥ ಮದ್ನೂರ ಮತ್ತಿತರರು ಜಾಗೃತಿ ಗೀತೆಗಳನ್ನು ಹಾಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ಸಂಚರಿಸಿತು.