ETV Bharat / city

ಹಣ ಡಬ್ಬಲ್, ಸೈಟ್ ಆಸೆ ತೋರಿಸಿ ನೂರಾರು ಕೋಟಿ ನಾಮ ಹಾಕಿದ್ದವರ ಬಂಧನ

ಹಣ ಡಬ್ಬಲ್, ಸೈಟ್ ಆಸೆ ತೋರಿಸಿ ಜನಕ್ಕೆ ನೂರಾರು ಕೋಟಿ ನಾಮ ಹಾಕಿದ್ದವರ ಬಂಧಿಸುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Arrest of two persons in Hubli
ಹುಬ್ಬಳ್ಳಿಯಲ್ಲಿ ಇಬ್ಬರ ಬಂಧನ
author img

By

Published : Dec 28, 2020, 2:29 PM IST

ಹುಬ್ಬಳ್ಳಿ: ಕಡಿಮೆ ದರಕ್ಕೆ ನಿವೇಶನ ಹಾಗೂ ಹಣ‌ ದ್ವಿಗುಗೊಳಿಸಿ ಕೊಡುವುದಾಗಿ ನಂಬಿಸಿ ಸಾವಿರಾರು ಜನರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ವಂಚಕನನ್ನ ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಸಾತಿಹಾಳ ಗ್ರಾಮದ ರಾಮಯ್ಯ ಗಂಗಯ್ಯ ಹಿರೇಮಠ ಎನ್ನುವವರೇ ಅರೋಪಿಗಳು. ವಂಚಕರು ದೇಶಪಾಂಡೆ ನಗರದಲ್ಲಿ ಗರೀಮಾ ಹೋಮ್ಸ್ ಆ್ಯಂಡ್​ ಫಾರ್ಮ್ ಹೌಸ್ ಲಿಮಿಟೆಡ್ ಹೆಸರಿನಲ್ಲಿ ಕಚೇರಿ ಮಾಡಿಕೊಂಡಿದ್ದರು. ಕಮೀಷನ್ ಆಧಾರದಲ್ಲಿಯೂ ಹಣ ನೀಡಿ ನಂತರ ಜಾಗ, ಮನೆ ನೀಡುವುದಾಗಿ ಮೋಸ ಮಾಡಿದ್ದರು.

ಗರೀಮಾ ಕಂಪನಿ ರಾಜಸ್ಥಾನ ಮೂಲದ ಬಿಜೆಪಿ ಶಾಸಕಿ ಶೋಭಾರಾಣಿಯದು ಎನ್ನಲಾಗಿದೆ. ಈ ಕಂಪನಿ ಹುಬ್ಬಳ್ಳಿ- ಧಾರವಾಡ ದಾಂಡೇಲಿ, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧೆಡೆ ನೂರಾರು ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.