ETV Bharat / city

ಆಟೋದಲ್ಲಿ 2 ತಲ್ವಾರ್ ಪತ್ತೆ: ಓರ್ವನ ಬಂಧನ, ಮೂವರು ಪರಾರಿ - ತಲ್ವಾರ್ ಪತ್ತೆ

ಆಟೋದಲ್ಲಿ ಮಾರಕಾಸ್ತ್ರ(Talwar) ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ
ಹುಬ್ಬಳ್ಳಿ
author img

By

Published : Nov 19, 2021, 11:10 AM IST

ಹುಬ್ಬಳ್ಳಿ: ನಗರದ ಇಬ್ರಾಹಿಂಪುರ ಖಾಜಾಬಾವಿ ಬಳಿ ಆಟೋದಲ್ಲಿ(Auto) ಮಾರಕಾಸ್ತ್ರ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈಶ್ವರ ನಗರದ ಫಯಾಜ್ ಮುಜಾಹಿದ್ ಬಂಧಿತ ಆರೋಪಿ. ಪೊಲೀಸರು ಆರೋಪಿಯಿಂದ 2 ತಲ್ವಾರ್(Talwar) ಹಾಗೂ ಆಟೋ ವಶಪಡಿಸಿಕೊಂಡಿದ್ದಾರೆ. ಯಾವುದೋ ಉದ್ದೇಶಕ್ಕಾಗಿ ಅಬ್ಬಾಸ್, ಸಮೀರ್ ಹಾಗೂ ಶಾನವಾಜ್ ಜತೆ ಫಯಾಜ್ ಆಟೋ ತೆಗೆದುಕೊಂಡು ಬಂದಿದ್ದ. ಗಸ್ತಿನಲ್ಲಿದ್ದ ಕಸಬಾಪೇಟ ಠಾಣೆ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆಟೋ ಬಿಟ್ಟು ಓಡಿದ್ದಾರೆ.

ಈ ವೇಳೆ ಫಯಾಜ್‌ನನ್ನು ಬಂಧಿಸಿದ ಪೊಲೀಸರು, ಉಳಿದ ಮೂವರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಮಂಗಳೂರು: DHL ಕಸ್ಟಮರ್ ಕೇರ್​​ ಹೆಸರಿನಲ್ಲಿ ಹಣ ವಂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.