ETV Bharat / city

'ಯುವರತ್ನ' ರಿಲೀಸ್: ಬೆಣ್ಣೆನಗರಿಯಲ್ಲಿ ಅಭಿಮಾನಿಗಳಿಗೆ ‌ಲಾಠಿ ರುಚಿ

author img

By

Published : Apr 1, 2021, 10:59 AM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಇಂದು ತೆರೆ ಕಂಡಿದ್ದು, ಎರಡು ವರ್ಷಗಳ ಬಳಿಕ ಪವರ್ ಸ್ಟಾರ್ ಆರ್ಭಟ ಶುರುವಾಗಿದೆ.

Yuvaratna' Release in davanagere
ಬೆಣ್ಣೆನಗರಿಯಲ್ಲಿ ಅಭಿಮಾನಿಗಳಿಗೆ ‌ಲಾಠಿ ರುಚಿ

ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಯುವರತ್ನ' ದಾವಣಗೆರೆಯ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಬೆಣ್ಣೆನಗರಿಯಲ್ಲಿ ಅಭಿಮಾನಿಗಳಿಗೆ ‌ಲಾಠಿ ರುಚಿ

ಗೀತಾಂಜಲಿ, ಪುಷ್ಪಾಂಜಲಿ ಹಾಗೂ ವಸಂತ ಎಂಬ ಮೂರು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಅಪ್ಪು ನಟನೆಯ ಸಿನಿಮಾ ವೀಕ್ಷಣೆಗಾಗಿ ಬೆಳಗ್ಗೆ 4 ಗಂಟೆಗೆ ಸರದಿ ಸಾಲಿನಲ್ಲಿ ನಿಂತು ಅಭಿಮಾನಿಗಳು ಟಿಕೆಟ್ ಪಡೆದರು. ಚಿತ್ರಮಂದಿರಗಳ ಬಳಿ ಜಮಾಯಿಸಿದ ನೂರಾರು ಅಭಿಮಾನಿಗಳು, ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಟನ ಪರ ಘೋಷಣೆ ಕೂಗಿದರು. ಈ ವೇಳೆ, ಕಿಕ್ಕಿರಿದು ನಿಂತಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇನ್ನು, ಗೀತಾಂಜಲಿ ಚಿತ್ರಮಂದಿರ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿ ತೋರಿಸಿದರು.

ಓದಿ: 8 ಭಾಷೆಗಳಿಗೆ ರಿಮೇಕ್ ಆದ ಕನ್ನಡದ ಥ್ರಿಲ್ಲರ್ ಚಿತ್ರ 'ಯು ಟರ್ನ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.