ETV Bharat / city

ವರ್ಲ್ಡ್ ಬಾಕ್ಸಿಂಗ್​ ಚಾಂಪಿಯನ್‌ ಶಿಪ್‌ : ಬೆಳ್ಳಿಗೆದ್ದ ಬೆಣ್ಣೆ ನಗರಿಯ ಅರ್ಜುನ್ ಹಲಕುರ್ಕಿ - ಬೆಳ್ಳಿಗೆದ್ದ ಬೆಣ್ಣೆ ನಗರಿಯ ಅರ್ಜುನ್ ಹಲಕುರ್ಕಿ

ಆಫ್ರಿಕಾದ ಟುನಿಯಾದಲ್ಲಿ ನಡೆದ ವರ್ಲ್ಡ್ ಬಾಕ್ಸಿಂಗ್​ ಚಾಂಪಿಯನ್​ಶಿಪ್‌ನಲ್ಲಿ ಬೆಣ್ಣೆ ನಗರಿಯ ಕ್ರೀಡಾ ವಸತಿ ನಿಲಯದ ಅರ್ಜುನ್ ಹಲಕುರ್ಕಿ ಬೆಳ್ಳಿ ಪದಕ ಗೆದ್ದಿದ್ದಾರೆ.

world
ಅರ್ಜುನ್ ಹಲಕುರ್ಕಿ
author img

By

Published : Jul 16, 2022, 10:44 PM IST

ದಾವಣಗೆರೆ : ಬೆಣ್ಣೆ ನಗರಿಯ ಕ್ರೀಡಾ ವಸತಿ ನಿಲಯದ ಅರ್ಜುನ್ ಹಲಕುರ್ಕಿ ಆಫ್ರಿಕಾದ ಟುನಿಯಾದಲ್ಲಿ ನಡೆದ ವರ್ಲ್ಡ್ ಬಾಕ್ಸಿಂಗ್​ ಚಾಂಪಿಯನ್‌ ಶಿಪ್‌ನಲ್ಲಿ ಟರ್ಕಿಯ ಅಯಾನ್ ಕಾಕಸ್ ಜೊತೆ ಸೆಣಸಾಟ ನಡೆಸಿ, ಅಂತಿಮ ಹಂತದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವ ಅರ್ಜುನ್ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

world
ಅರ್ಜುನ ಹಲಕುರ್ಕಿ

ಅಂತಾರಾಷ್ಟ್ರೀಯ ಕುಸ್ತಿ ಪಟು ಅರ್ಜುನ್ ಈ ಹಿಂದೆ ಏಷ್ಯನ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿದ್ದರು. ಇವರು ದಾವಣಗೆರೆಯ ಕ್ರೀಡಾ ವಸತಿ ನಿಲಯದ ಕುಸ್ತಿ ತರಬೇತುದಾರ ಶಿವಾನಂದ ಅವರ ಬಳಿ 10 ವರ್ಷ ತರಬೇತಿ ಪಡೆದುಕೊಂಡಿದ್ದಾರೆ. ಅರ್ಜುನ್ ಅವರು ಪ್ರಸ್ತುತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪದಕ‌ ಗೆದ್ದು ಬೀಗಿದ ಅರ್ಜುನ್​​ರವರಿಗೆ ಕುಸ್ತಿ ತರಬೇತುದಾರರು, ಕ್ರೀಡಾಭಿಮಾನಿಗಳು, ಸ್ನೇಹಿತರು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಕೆಎಸ್‌ಸಿಎಯಿಂದ 'ಮಹಾರಾಜ ಟ್ರೋಫಿ' ಅನಾವರಣ: ಆ.7ರಿಂದ ಮೈಸೂರಿನಲ್ಲಿ ಟಿ-20 ಟೂರ್ನಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.