ETV Bharat / city

ಯಡಿಯೂರಪ್ಪ ಸ್ವಯಂಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು: ಅಮಿತ್ ಶಾ - ದಾವಣಗೆರೆ ಜಿಲ್ಲೆ

ಯಡಿಯೂರಪ್ಪ ಸ್ವಯಂಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಈ ಮೊದಲು ಹೈಕಮಾಂಡ್‌ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ.

Union Home Minister Amith Sha Speech in Davanagere
ದೇಶದ 130 ಕೋಟಿ ಜನರು ಕೋವಿಡ್‌ ವಿರುದ್ಧ ಹೋರಾಟ ಮಾಡಬೇಕು - ಸಚಿವ ಅಮಿತ್‌ ಶಾ
author img

By

Published : Sep 2, 2021, 5:26 PM IST

Updated : Sep 2, 2021, 7:25 PM IST

ದಾವಣಗೆರೆ: ಬಿ.ಎಸ್.ಯಡಿಯೂರಪ್ಪನವರು ಸ್ವಯಂಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕಕ್ಕೆ ಹೊಸ ಸಿಎಂ ಆಗಲಿ ಎಂದು ಅವರೇ ಬಯಸಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಹೊಸ ಮುಖಗಳಿಗೆ ಸಿಎಂ ಸ್ಥಾನದ ಅವಕಾಶ ನೀಡುವ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದೇವೆ ಎಂದರು.

'ಯಡಿಯೂರಪ್ಪ ಅವರೇ ಸ್ವಯಂಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು': ಅಮಿತ್‌ ಶಾ

'ಕೊರೊನಾ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದೇವೆ'

ಕೋವಿಡ್‌ ಜನಜೀವನ ಹಾಗೂ ಸರ್ಕಾರಕ್ಕೆ ಸವಾಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದೇವೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಹೇಳಿದರು.

ದಾವಣಗೆರೆಯಲ್ಲಿ ಪೊಲೀಸ್‌ ಶಾಲೆ, ಗ್ರಂಥಾಲಯ ಹಾಗೂ ಗಾಂಧಿ ಭವನ ಉದ್ಘಾಟಿಸಿ ಮಾತನಾಡಿದ ಅವರು, ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಾ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. 130 ಕೋಟಿ ಜನರೂ ಕೂಡಾ ಸೋಂಕಿನ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಮೊದಲು ಬಿಎಸ್‌ವೈ, ಇದೀಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉತ್ತಮವಾಗಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಬಿ.ಎಸ್‌.ಯಡಿಯೂರಪ್ಪ ಬಳಿಕ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಬೊಮ್ಮಾಯಿ ಅವರ ಮೇಲೆ ವಿಶ್ವಾಸವಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಸಂಪೂರ್ಣ ಬಹುಮತದಿಂದ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದಿರುವ ಶಾ, ರಾಜ್ಯವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಿ ಎಂದು ಬೊಮ್ಮಾಯಿಗೆ ವೇದಿಕೆಯಲ್ಲೇ ಸಲಹೆ ನೀಡಿದರು.

'ಸೆಪ್ಟೆಂಬರ್‌ ಕೊನೆಯ ವೇಳೆಗೆ ಎಲ್ಲರಿಗೂ ಲಸಿಕೆ'

ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್‌ ಡ್ರೈವ್‌ ಮಾಡಿರುವ ದೇಶ ಭಾರತ. ಸೆಪ್ಟೆಂಬರ್‌ ಕೊನೆಯ ವೇಳೆಗೆ ಎಲ್ಲರಿಗೂ ಕೊರೊನಾ ಲಸಿಕೆ ಹಾಕುವ ಕಾರ್ಯ ಮಾಡಲಿದ್ದೇವೆ. ಮೋದಿ ಸರ್ಕಾರ ಬಡವರ, ದಲಿತರ ಆದಿವಾಸಿಗಳ ಬೆಳವಣಿಗೆ ಬಗ್ಗೆ ಚಿಂತಿಸುತ್ತದೆ. ಲಾಕ್‌ಡೌನ್‌ನಿಂದಾಗಿ ಬಡವರಿಗೆ ಸಾಕಷ್ಟು ಸಂಕಷ್ಟ ಎದುರಾಗಿತ್ತು. ಐದು ಕೆಜಿ ದಿನಸಿ ನೀಡಲು ಮೋದಿ ಸರ್ಕಾರ ನಿರ್ಧಾರ ಮಾಡಿದೆ. ಸಾವಿರಾರು ಕೋಟಿ ರೂ ಪ್ಯಾಕೇಜ್ ಅನ್ನು ಪ್ರತಿಯೊಂದು ರಾಜ್ಯದ ಜಿಲ್ಲೆಗೆ ನೀಡಲು ಸಜ್ಜುಗೊಳಿಸಿದ್ದಾರೆ. ದೇಶಾದ್ಯಂತ ಸಾವಿರಾರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗಿದೆ. ಆಕ್ಸಿಜನ್‌ಗಾಗಿ ಎಲ್ಲೂ ಹೋಗದಂತೆ ಸರ್ಕಾರ ಕೆಲಸ ಮಾಡಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

'ಅಮಿತ್‌ ಶಾಜೀ ಅಪ್ರತಿಮ, ಅತ್ಯಂತ ಗಟ್ಟಿ ಗೃಹ ಸಚಿವರು'- ಸಿಎಂ ಬಸವರಾಜ ಬೊಮ್ಮಾಯಿ

'ಅಮಿತ್‌ ಶಾಜೀ ಅಪ್ರತಿಮ ನಾಯಕ; ಅತ್ಯಂತ ಗಟ್ಟಿ ಗೃಹ ಸಚಿವರು': ಸಿಎಂ ಬೊಮ್ಮಾಯಿ
ಅಮಿತ್‌ ಶಾಜೀ ಅಪ್ರತಿಮ, ಅತ್ಯಂತ ಗಟ್ಟಿ ಗೃಹ ಸಚಿವರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಡಿಹೊಗಳಿದರು. ಕರ್ನಾಟಕದ ಮೇಲೆ, ಕನ್ನಡಿಗರ ಮೇಲೆ ಪ್ರೀತಿಯಿಂದ ಗೃಹ ಸಚಿವರು ಬಂದಿದ್ದಾರೆ. ಸರ್ದಾರ್‌ ವಲ್ಲಬಭಾಯಿ ಪಟೇಲ್ ನಂತರ ಅತ್ಯಂತ ದಿಟ್ಟ ಸಚಿವರು ಎಂದರೆ ಅದು ಅಮಿತಾ ಶಾ ಎಂದು ಗುಣಗಾನ ಮಾಡಿದರು.

ಜಮ್ಮು-ಕಾಶ್ಮೀರವನ್ನು ಭಾರತದ ಅಖಂಡತೆಗೆ ಸೇರಿಸಿದ್ದಾರೆ. ಪಕ್ಕದ ಅಫ್ಘಾನ್‌ ಆತಂಕದಲ್ಲಿದೆ. ಅಲ್ಲಿನ ಮಹಿಳೆಯರು, ಮಕ್ಕಳು ಬದುಕು ದುಸ್ತರವಾಗಿದೆ. ಆರ್ಟಿಕಲ್‌ 371 ಜಾರಿ ಮಾಡಿ ಅಮಿತ್ ಶಾ ಇತಿಹಾಸದ ಪುಟ ಸೇರಿದ್ದಾರೆ. ರಾಷ್ಟ್ರದ್ರೋಹಿ, ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಕೇಂದ್ರ ಯಶಸ್ವಿಯಾಗಿದೆ. ಅದರಂತೆ ರಾಜ್ಯದಲ್ಲೂ ಅಂತಹ ಸಂಘಟನೆಗಳನ್ನು ಮಟ್ಟ ಹಾಕಿದ್ದೇವೆ. ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಫೊರೆನ್ಸಿಕ್ಸ್ ಲ್ಯಾಬ್ ತಡವಾಗಿ ರಿಪೋರ್ಟ್ ಬರುತ್ತಿದೆ ಎಂದು ಕಳೆದ ಬಾರಿ ಅಮಿತಾ ಶಾ ಬಂದಾಗ ತಿಳಿಸಿದ್ದರು. ಅದಕ್ಕಾಗಿ ಮೊಬೈಲ್ ಫೋರೆನ್ಸಿಕ್ ಲ್ಯಾಬ್, ಅಪರಾಧ ಘಟನೆ ನಡೆದ ಸ್ಥಳದಲ್ಲಿದ್ದು ಖುದ್ದು ವರದಿ ನೀಡಬೇಕು. ಈ ಎರಡನ್ನು ರಾಜ್ಯದ ಪೊಲೀಸ್ ಇಲಾಖೆ ಅಳವಡಿಸಿಕೊಂಡಿದೆ ಎಂದರು.

Last Updated : Sep 2, 2021, 7:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.