ETV Bharat / city

ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಂಡು ದೋಚುತ್ತಿದ್ದ ಗ್ಯಾಂಗ್ ಅಂದರ್​​!

ಚಂದ್ರಶೇಖರಪ್ಪ ಎಂಬುವವರ ಮನೆ ಬಾಗಿಲು ಮುರಿದು 83 ಗ್ರಾಂ ಚಿನ್ನ, ನಗದು ದೋಚಿ ಪರಾರಿಯಾಗಿದ್ದ ಮಹಾರಾಷ್ಟ್ರ ಮೂಲದ ಪಾರ್ಧಿಗ್ಯಾಂಗ್​​ನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Three persons have been arrested by vidyanagar police
author img

By

Published : Aug 22, 2019, 11:13 PM IST

Updated : Aug 23, 2019, 1:37 PM IST

ದಾವಣಗೆರೆ: ದಾವಣಗೆರೆ ಹೊರವಲಯದ ಡಾಲರ್ಸ್ ಕಾಲೋನಿಯ ಚಂದ್ರಶೇಖರಪ್ಪ ಎಂಬುವವರ ಮನೆಯ ಬಾಗಿಲು ಮುರಿದು 83ಗ್ರಾಂ ಚಿನ್ನ, ನಗದು ದೋಚಿ ಪರಾರಿಯಾಗಿದ್ದ ಮಹಾರಾಷ್ಟ್ರ ಮೂಲದ ಪಾರ್ಧಿಗ್ಯಾಂಗ್ ಈಗ ವಿದ್ಯಾನಗರ ಪೊಲೀಸರ ಅತಿಥಿಯಾಗಿದೆ.

ಈ ಗ್ಯಾಂಗ್​​ನ 7 ಮಂದಿಯ ಪೈಕಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೋಹನ್ ನಾಮದೇವ ಕಾಳೆ, ದಶರಥ ಗಣಪತಿ ಕಾಳೆ, ಲಕ್ಕನ್ ಕಾಳೆ ಬಂಧಿತರು. ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಬಂಧಿತರಿಂದ 253ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ.

ಈ ಘಟನೆ ನಡೆದ ದಿನವೇ ಇದೇ ಗ್ಯಾಂಗ್ ಶಾಮನೂರಿನಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿತ್ತು. ಈ ಘಟನೆಯಿಂದ ಇಡೀ ದಾವಣಗೆರೆ ನಗರವೇ ಬೆಚ್ಚಿ ಬಿದ್ದಿತ್ತು. ಚಂದ್ರಶೇಖರಪ್ಪ, ಪತ್ನಿ ಚಂದ್ರಕಲಾ ಹಾಗೂ ಮಗನ ಮೇಲೆ ಹಲ್ಲೆ ಮಾಡಿ ಕಟ್ಟಿ ಹಾಕಿದ್ದರು.

ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ್​​

ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ವಾರದಲ್ಲಿ ಆರು ಕಡೆ ಕಳ್ಳತನ ಮಾಡಿತ್ತು. ಬಾಗೇಪಲ್ಲಿಯಲ್ಲಿ ಮನೆಯಲ್ಲಿ ಚಿನ್ನಾಭರಣ ದೋಚಿತ್ತು. ಬಳಿಕ ಮಾಲೀಕನನ್ನು ಕೊಲೆಗೈದು ಪರಾರಿಯಾಗಿತ್ತು. ಆಂಧ್ರದ ಕರ್ನೂಲಿನಲ್ಲಿ, ಕಲಬುರಗಿಯ ಜೇವರ್ಗಿ ತಾಲೂಕಿನಲ್ಲಿ, ಬಳ್ಳಾರಿಯ ಕೂಡ್ಲಿಗಿ ತಾಲೂಕಿನಲ್ಲಿಯೂ ನಗ-ನಾಣ್ಯ ದೋಚಿತ್ತು.

ಮಹರಾಷ್ಟ್ರದ ಉನ್ಮಾನಾಬಾದ್​​ನ ಪೊಲೀಸರ ಸಹಕಾರ ಪಡೆದ ವಿದ್ಯಾನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

Intro:(ಸ್ಟ್ರಿಂಜರ್: ಮಧುದಾವಣಗೆರೆ)

ದಾವಣಗೆರೆ: ಒಂಟಿ ಮನೆಗಳೇ ಟಾರ್ಗೆಟ್ ಮಾಡಿ, ಲಾರಿಯೊಂದಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುವ ಒಂಟಿ ಮನೆಗಳನ್ನೇ ರಾಬರಿ ಗ್ಯಾಂಗ್ ಟಾರ್ಗೆಟ್ ಮಾಡಿ, ಮನೆಯವರನ್ನು ಕಟ್ಟಿ ಹಾಕಿ, ಮನೆಯಲ್ಲಿದ್ದ ನಗ, ನಾಣ್ಯ ದೋಚಿಕೊಂಡು ಪರಾರಿಯಾಗುತ್ತಿತ್ತು. ತಮಿಳಿನ ಖಾಕಿ ಸಿನಿಮಾದಲ್ಲಿ ಹೇಗೆ ಡಕಾಯಿತರು ಒಂಟಿ ಮನೆಗಳನ್ನು ರಾಬರೀ ಮಾಡುತ್ತಿದ್ದರೋ ಅದೇ ರೀತಿ, ಈ ಗ್ಯಾಂಗ್ ರಾಬರೀ ಮಾಡುತ್ತಿತ್ತು, ಇಂತಹ ಖತರ್ ನಾಕ್ ಗ್ಯಾಂಗಿಗೆ ದಾವಣಗೆರೆ ಪೊಲೀಸರು ಎಡೆಮುರಿ ಕಟ್ಟಿದ್ದಾರೆ.

ಹೌದು.. ತಮಿಳು ನಟ ಕಾರ್ತಿಕ್ ಅಭಿನಯದ ಖಾಕಿ ಸಿನಿಮಾದ ದರೋಡೆಯ ಈ ದೃಶ್ಯಗಳನ್ನ ಒಮ್ಮೆ ನೋಡಿದ್ರೆ ಬೆಚ್ಚಿ ಬೀಳುವಂತಿವೆ, ಒಂಟಿ ಮನೆಗಳ ಮೇಲೆ ದಾಳಿ ಮಾಡುವ ಡಕಾಯಿತರ ತಂಡ ಮನೆಯವರ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ನಗನಾಣ್ಯವನ್ನು ದೋಚಿ ಪರಾರಿಯಾಗುತ್ತದೆ.. ಅದೇ ರೀತಿ ಜೂನ್ ೨೦ ರಂದು ದಾವಣಗೆರೆ ಹೊರವಲಯದ ಡಾಲರ್ಸ್ ಕಾಲೋನಿಯ ಚಂದ್ರಶೇಖರಪ್ಪ ಎಂಬುವವರ ಮನೆಯ ಬಾಗಿಲು ಮುರಿದು, ಚಂದ್ರಶೇಖರಪ್ಪನವರ ಚಂದ್ರಕಲಾ ಹಾಗೂ ಅವರ ಮಗ ಮೇಲೆ ಹಲ್ಲೆ ಮಾಡಿ, ಅವರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ೮೩ ಗ್ರಾಂ ಬಂಗಾರ, ನಗದು ದೋಚಿ ಪರಾರಿಯಾಗಿತ್ತು. ಅದೇ ದಿನ ಶಾಮನೂರಿನಲ್ಲಿ ಮತ್ತೊಂದು ಮನೆಯ ಮೇಲೆ ಇದೇ ಗ್ಯಾಂಗ್ ರಾಬರಿಗೆ ಪ್ರಯತ್ನ ಪಟ್ಟಿತ್ತು. ಈ ಘಟನೆಯಿಂದ ಇಡೀ ದಾವಣಗೆರೆ ನಗರವೇ ಬೆಚ್ಚಿ ಬಿದ್ದಿದ್ದು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ವಿದ್ಯಾನಗರ ಪೊಲೀಸರು ಇದೀಗ ಮಹರಾಷ್ಟ್ರ ಮೂಲದ ಪಾರ್ಧಿ ಗ್ಯಾಂಗ್ ಅನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.....

ಮಹಾರಾಷ್ಟ್ರ ಮೂಲದ ಈ ಪಾರ್ಧಿ ಗ್ಯಾಂಗ್ ನಲ್ಲಿ ಏಳು ಜನರಿದ್ದು ಸದ್ಯ ವಿದ್ಯಾನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪಾರ್ಧಿ ಗ್ಯಾಂಗ್ ಲೀಡರ್ ಮೋಹನ್ ನಾಮದೇವ್ ಯೊಂದಿಗೆ ಆತನ ಸಹಚರರಾದ ದಶರಥ ಗಣಪತಿ ಕಾಳೆ, ಲಕ್ಕನ್ ಕಾಳೆ ಸಹೋದರನ್ನು ಪೊಲೀಸರು ಬಂಧಿಸಿದ್ದು ಉಳಿದ ಐವರಿಗಾಗೀ ಬಲೆ ಬೀಸಿದ್ದಾರೆ. ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ಒಂದು ವಾರದಲ್ಲಿ ಆರು ಕಡೆ ರಾಬರೀ ಮಾಡಿತ್ತು. ಈ ಗ್ಯಾಂಗ್ ಕೋಲಾರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮನೆಯ ಮಾಲೀಕನನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ರಾಬರೀ ಮಾಡಿತ್ತು. ಆಂಧ್ರ ಪ್ರದೇಶದ ಕಾರ್ನೂಲಿನಲ್ಲಿ ಓರ್ವನ ಮೇಲೆ ಹಲ್ಲೆ ಮಾಡಿ, ರಾಬರೀ ಮಾಡಿದ್ದ ಗ್ಯಾಂಗ್ ಅಂದೇ ಮತ್ತೊಂದು ಮನೆಯಲ್ಲಿ ರಾಬರೀ ಮಾಡಿತ್ತು. ಕಲ್ಬುರ್ಗಿಯ ಜೇವರ್ಗಿಯಲ್ಲಿ ಮನೆಯ ಮೇಲೆ ದಾಳಿ ಮಾಡಿ ಈ ಗ್ಯಾಂಗ್ ಐವರನ್ನು ಕಟ್ಟಿ ಹಾಕಿ ರಾಬರೀ ಮಾಡಿತ್ತು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲಿನಲ್ಲಿಯೂ ಕೂಡ ಮನೆಯವರನ್ನು ಕಟ್ಟಿ ಹಾಕಿ ರಾಬರೀ ಮಾಡಿತ್ತು. ಇದೀಗ ವಿದ್ಯಾನಗರ ಪೊಲೀಸರು ಮೂವರನ್ನು ಬಂಧಿಸಿದ್ದು ಬಂಧಿತರಿಂದ ೨೫೩ ಗ್ರಾಂ ತೂಕದ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹತ್ತು ಲಕ್ಷ ಮೌಲ್ಯದ ಲಾರಿಯನ್ನು ವಿದ್ಯಾನಗರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ...
ವಿದ್ಯಾನಗರ ಪೊಲೀಸರಿಗೆ ಮಹರಾಷ್ಟ್ರದ ಉನ್ಮಾನಾ ಬಾದ್ ನ ಸಹಕಾರ ನೀಡಿ ನರಹಂತಕ ಪಾರ್ಧಿ ಗ್ಯಾಂಗನಲ್ಲಿದ್ದ ಮೂವರನ್ನು ಬಂದಿಸಲು ಸಹಕಾರ ನೀಡಿದ್ದಾರೆ. ಸದ್ಯ ವಿದ್ಯಾನಗರ ಪೊಲೀಸರು ಪಾರ್ಧಿ ಗ್ಯಾಂಗ್ ನ ನಾಲ್ವರಿಗಾಗೀ ತೀರ್ವ ಶೋಧ ಆರಂಭಿಸಿದ್ದಾರೆ. ಘಟನೆ ನಡೆದ ೩೨ ದಿನಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಸಾರ್ವಜನಿಕರಲ್ಲಿ ಕೊಂಚ ನಿಟ್ಟುಸಿರುವ ಬಿಟ್ಟಿದ್ದಾರೆ..

ಪ್ಲೊ..

ಬೈಟ್ ೦೧ : ಹನುಮಂತರಾಯ್, ಎಸ್ಪಿ
ಬೈಟ್ ೦೨ : ಹನುಮಂತರಾಯ್, ಎಸ್ಪಿ

Body:(ಸ್ಟ್ರಿಂಜರ್: ಮಧುದಾವಣಗೆರೆ)

Conclusion:
Last Updated : Aug 23, 2019, 1:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.