ETV Bharat / city

ದಾವಣಗೆರೆ: ಶಿಕ್ಷಕನ ತಲೆಗೆ ಬಕೆಟ್ ತೊಡಿಸಿ ವಿಕೃತ ಮನಸ್ಸಿನ ವಿದ್ಯಾರ್ಥಿಗಳ ಪುಂಡಾಟ - ಗುರುವಿನ ತಲೆ ಮೇಲೆ ಬಕೆಟ್ ಹಾಕಿದ ವಿದ್ಯಾರ್ಥಿಗಳ ವಿಡಿಯೋ

ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಹೈಸ್ಕೂಲ್​ನಲ್ಲಿ ತರಗತಿಗೆ ಪಾಠ ಮಾಡಲು ಬಂದ ಗುರುವಿನ ತಲೆಯ ಮೇಲೆ ಬಕೆಟ್ ಹಾಕಿ, ಹಲ್ಲೆಯನ್ನೂ ನಡೆಸಿ ವಿದ್ಯಾರ್ಥಿಗಳು ಪುಂಡಾಟಿಕೆ ನಡೆಸಿದ್ದಾರೆ.

Students
ಶಿಕ್ಷಕನ ತಲೆ ಮೇಲೆ ಬಕೆಟ್ ಹಾಕಿದ ಪುಂಡ ವಿದ್ಯಾರ್ಥಿಗಳು
author img

By

Published : Dec 10, 2021, 10:25 AM IST

Updated : Dec 10, 2021, 12:06 PM IST

ದಾವಣಗೆರೆ: ಹಿಂದಿ ಪಾಠ ಮಾಡಲು ತರಗತಿಗೆ ಬಂದು ಕುಳಿತಿದ್ದ ಹಿರಿಯ ಶಿಕ್ಷಕರಿಗೆ ಪುಂಡ ವಿದ್ಯಾರ್ಥಿಗಳು ಕೀಟಲೆ ಮಾಡಿ ತಲೆಯ ಮೇಲೆ ಬಕೆಟ್ ತೊಡಿಸಿ ಸತಾಯಿಸಿರುವ ಅಮಾನವೀಯ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಹೈಸ್ಕೂಲ್​ನಲ್ಲಿ ನಡೆದಿದೆ.

ಶಿಕ್ಷಕನ ತಲೆ ಮೇಲೆ ಬಕೆಟ್ ಹಾಕಿದ ಪುಂಡ ವಿದ್ಯಾರ್ಥಿಗಳು

ಶಿಕ್ಷಕ ಪ್ರಕಾಶ್​ ಬೋಗೇರ್​ ಎನ್ನುವವರ ಮೇಲೆ ವಿದ್ಯಾರ್ಥಿಗಳು ಹಲ್ಲೆ ಕೂಡಾ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಾಲ್ಕೈದು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದು, ದೃಶ್ಯವನ್ನು ತರಗತಿಯಲ್ಲಿದ್ದ ಸಹ ವಿದ್ಯಾರ್ಥಿಗಳು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಈ ಘಟನೆ ಬೆಳಕಿಗೆ ಬಂದ ತಕ್ಷಣ, ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಪುಂಡ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Last Updated : Dec 10, 2021, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.