ದಾವಣಗೆರೆ: ಕೋವಿಡ್ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತರಾಟೆಗೆ ತೆಗೆದುಕೊಂಡರು. ದೇವಸ್ಥಾನಗಳಲ್ಲಿ ಸಾಕಷ್ಟು ಜನ ಸೇರುತ್ತಿರುವುದನ್ನು ಗಮನಿಸಿರುವ ಅವರು ಕಡಿವಾಣ ಹಾಕುವಂತೆ ಸೂಚನೆ ನೀಡಿದರು.
ಜಿಲ್ಲೆಯ ಜಗಳೂರಿ ಮಡ್ರಳ್ಳಿ ದೇವಸ್ಥಾನ, ಚನ್ನಗಿರಿ ಅಮ್ಮನಗುಡ್ಡ ದೇವಸ್ಥಾನಗಳಲ್ಲಿ ಹೆಚ್ಚಿನ ಜನ ಸೇರುತಿದ್ದು, ಅಧಿಕಾರಿಗಳಿಗೆ ನೀವೇನು ಮಾಡುತಿದ್ದೀರಿ?. ಅಮ್ಮನಗುಡ್ಡದಲ್ಲಿ 100 ಜನ ಬಂದು ಕುರಿ ಕಡಿದು ಪಾರ್ಟಿ ಮಾಡಿ ಹೋಗುತ್ತಿದ್ದಾರೆ. ದೇವಸ್ಥಾಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಗ್ಯಾದರಿಂಗ್ಗೆ ಅವಕಾಶ ಇಲ್ಲ. ಶ್ರಾವಣದಲ್ಲಿ ದೇವಸ್ಥಾನಗಳ ಮೇಲೆ ನಿಗಾ ಇಡುವಂತೆ ಡಿಸಿ ಬೀಳಗಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಾಗೆ ಮದುವೆ, ಸಮಾರಂಭಗಳಲ್ಲಿಯೂ 100 ಜನರಿಗೆ ಮಾತ್ರ ನೀಡಿ. ಅದಕ್ಕಿಂತ ಹೆಚ್ಚಿನ ಜನ ಸೇರುತ್ತಿದ್ದರೂ ನೀವ್ಯಾಕೆ? ದಂಡ ಹಾಕೋದನ್ನ ನಿಲ್ಲಿಸಿದ್ದೀರಿ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಕೋವಿಡ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ದೇವಸ್ಥಾನಗಳ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನ ಸೇರುವಂತಿಲ್ಲ. ಕಠಿಣ ರೀತಿಯಲ್ಲಿ ದಂಡ ವಿಧಿಸುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.