ETV Bharat / city

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ: ನಾಲ್ವರ ಬಂಧನ! - ದಾವಣಗೆರೆ ಲೇಟೆಸ್ಟ್​​ ಕ್ರೈಂ ನ್ಯೂಸ್​​

ದಾವಣಗೆರೆಯ ರಿಯಲ್ ಎಸ್ಟೇಟ್ ಉದ್ಯಮಿ ಸೀಮೆ ಎಣ್ಣೆ ಪರಮೇಶ್ ಹತ್ಯೆ ಪ್ರಕರಣಕ್ಕೆ‌ ಸಂಬಧಿಸಿದಂತೆ ನಾಲ್ವರು ಆರೋಪಿಗಳನ್ನು ಬಸವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

davanagere
ರಿಯಲ್ ಎಸ್ಟೇಟ್ ಉದ್ಯಮಿ ಸೀಮೆಎಣ್ಣೆ ಪರಮೇಶ್
author img

By

Published : Aug 12, 2021, 8:50 PM IST

Updated : Aug 12, 2021, 8:59 PM IST

ದಾವಣಗೆರೆ: ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ ಪ್ರಕರಣಕ್ಕೆ‌ ಸಂಬಧಿಸಿದಂತೆ ಬಸವನಗರ ಠಾಣೆ ಪೊಲೀಸರು ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ. ಹನುಮಂತ್, ಬಸವರಾಜ್, ಕುಮಾರ್ ಹಾಗೂ ನಯಾಜ್ ಬಂಧಿತ ಆರೋಪಿಗಳು.

ಸಿಸಿ ಟಿವಿ ದೃಶ್ಯಾವಳಿ

ಕಳೆದ ರಾತ್ರಿ 9.30ರ ಸುಮಾರಿಗೆ ದಾವಣಗೆರೆ ಬಸವರಾಜ್ ಪೇಟೆಯ ರಿಯಲ್ ಎಸ್ಟೇಟ್ ಉದ್ಯಮಿ ಸೀಮೆಎಣ್ಣೆ ಪರಮೇಶ್ (45) ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದರು. ದೇವಸ್ಥಾನದ ಪಟ್ಟಿ ಕೇಳುವ ವಿಚಾರವಾಗಿ ನಡೆದಿದ್ದ ಗಲಾಟೆಯೊಂದಕ್ಕೆ ಕೊಲೆಯಾದ ಪರಮೇಶ್ ಪಂಚಾಯಿತಿ ಮಾಡಿದ್ದನಂತೆ.

davanagere crime news
ಬಂಧಿತ ಆರೋಪಿಗಳು

ನಮ್ಮ ವಿರುದ್ದ ಪಂಚಾಯಿತಿ ಮಾಡಿ ನಾನು ಇಲ್ಲದ ವೇಳೆ ಮನೆಗೆ ನುಗ್ಗಿ ನನ್ನ ಹೆಂಡತಿಗೆ ಗಾರೆ ಮಂಜ ಎಂಬುವನಿಂದ ಹೊಡೆಸಿದ್ದ ಎಂದು ಕೋಪಿತಗೊಂಡಿದ್ದ ಆರೋಪಿ ಬಸವರಾಜ್, ಗಾರೆ ಮಂಜನನ್ನ ನೀನೆ ಬಚ್ಚಿಟ್ಟಿದೀಯಾ?, ಎಲ್ಲಿದ್ದಾನೆ ಹೇಳು ಎಂದು ಜಗಳವಾಡಿದ್ದಾನೆ. ಇದೇ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾವಣಗೆರೆ: ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ

ಹತ್ಯೆ ಮಾಡಲು ಹೊಂಚು.. ಸಿಸಿ ಟಿವಿಯಲ್ಲಿ ದೃಶ್ಯ ಸೆರೆ: ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲು ಹೊಂಚು ಹಾಕಿ ಕೂತಿದ್ದ ಕೆಲ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

Last Updated : Aug 12, 2021, 8:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.