ETV Bharat / city

ಹತಾಶರಾಗಿ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡು ಮಾತನಾಡುತ್ತಿದ್ದಾರೆ : ಎಸ್‌ಎಸ್‌ಎಂಗೆ ಸಿದ್ದೇಶ್ವರ್ ತಿರುಗೇಟು

ಸಾರ್ವಜನಿಕ ಸ್ಥಳಗಳಿಗೆ ನಾವು ನಮ್ಮ ತಂದೆ ಹೆಸರು ಇಡಲು ಸರ್ಕಾರದ ಅನುಮತಿ ತೆಗೆದುಕೊಂಡಿದ್ದೇವೆ. ಅವರು ಎಲ್ಲೆಲ್ಲಿ ಹೆಸರು ಇಟ್ಟಿದ್ದಾರೆ?, ಅದಕ್ಕೆಲ್ಲಾ ಅನುಮತಿ ಪಡೆದಿದ್ದಾರಾ? ಕೇಳಿ ನೋಡಿ. ಅಧಿಕಾರಕ್ಕೆ ಬಂದರೆ ನಮ್ಮ ತಂದೆಯ ಹೆಸರು ತೆಗಿಸುತ್ತಾರಂತೆ. ಅವರು ಅಧಿಕಾರಕ್ಕೆ ಬರೋದಿಲ್ಲ, ಇನ್ನೆಲ್ಲಿ ಹೆಸರು ತೆಗೆಸುತ್ತಾರೆ ಎಂದು ವ್ಯಂಗ್ಯವಾಡಿದರು..

MP GM Siddeshwar Statement at Davanagere
ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್​​ ವಿರುದ್ಧ ಸಂಸದ ಜಿ.ಎಂ ಸಿದ್ದೇಶ್ವರ್ ವಾಗ್ದಾಳಿ
author img

By

Published : Apr 20, 2022, 2:08 PM IST

ದಾವಣಗೆರೆ : ಹತಾಶರಾಗಿ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡು ಶ್ರೀಮಂತಿಕೆ, ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್​​ ವಿರುದ್ಧ ಸಂಸದ ಜಿ.ಎಂ ಸಿದ್ದೇಶ್ವರ್ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 20:20 ಕಮಿಷನ್ ಪಡೆಯುತ್ತಿದ್ದಾರೆ ಎಂಬ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಆರೋಪಕ್ಕೆ ತಿರುಗೇಟು ನೀಡಿದರು.

ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್​​ ವಿರುದ್ಧ ಸಂಸದ ಜಿ.ಎಂ ಸಿದ್ದೇಶ್ವರ್ ವಾಗ್ದಾಳಿ ನಡೆಸಿರುವುದು

ನಮ್ಮ ಜಿಲ್ಲೆಯಲ್ಲಿ ಯಾರು ಕೂಡ ಕಮಿಷನ್ ತೆಗೆದುಕೊಂಡಿಲ್ಲ. ಅವರು ತೆಗೆದುಕೊಂಡಿದ್ದಾರೆ, ಅದಕ್ಕೆ ಹೇಳುತ್ತಿದ್ದಾರೆ. ಅವರನ್ನು ಮೂರು ಬಾರಿ ಲೋಕಸಭೆ, ವಿಧಾನಸಭೆಯಲ್ಲಿ ಸೋಲಿಸಿದ್ದೇವೆ. ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಅವರಿಗೆ ಕುಂದುವಾಡ ಕೆರೆ ನೆನಪಾಗಿದೆ. ಸೋತಾಗಿನಿಂದ ಹೊರಗೆ ಬಂದಿಲ್ಲ, ಈಗ ಮಾತನಾಡುತ್ತಾರೆ ಎಂದು ದೂರಿದರು.

ಸಾರ್ವಜನಿಕ ಸ್ಥಳಗಳಿಗೆ ನಾವು ನಮ್ಮ ತಂದೆ ಹೆಸರು ಇಡಲು ಸರ್ಕಾರದ ಅನುಮತಿ ತೆಗೆದುಕೊಂಡಿದ್ದೇವೆ. ಅವರು ಎಲ್ಲೆಲ್ಲಿ ಹೆಸರು ಇಟ್ಟಿದ್ದಾರೆ?, ಅದಕ್ಕೆಲ್ಲಾ ಅನುಮತಿ ಪಡೆದಿದ್ದಾರಾ? ಕೇಳಿ ನೋಡಿ. ಅಧಿಕಾರಕ್ಕೆ ಬಂದರೆ ನಮ್ಮ ತಂದೆಯ ಹೆಸರು ತೆಗಿಸುತ್ತಾರಂತೆ. ಅವರು ಅಧಿಕಾರಕ್ಕೆ ಬರೋದಿಲ್ಲ, ಇನ್ನೆಲ್ಲಿ ಹೆಸರು ತೆಗೆಸುತ್ತಾರೆ ಎಂದು ವ್ಯಂಗ್ಯವಾಡಿದರು.

ನಾನು ಅವರ ಹೆಸರು ತೆಗೆಸಬಹುದು. ಆದರೆ, ಅಂತಹ ಕೀಳು ಮಟ್ಟಕ್ಕೆ‌ ನಾನು ಇಳಿಯುವುದಿಲ್ಲ. ಕೆಲವರು ಪಾಲಿಕೆ ಸದಸ್ಯರು ಕಾಂಗ್ರೆಸ್ ‌ನಡವಳಿಕೆಗೆ ಬೇಸತ್ತು, ಬಿಜೆಪಿಗೆ ಸೇರುತ್ತಿದ್ದಾರೆ. ಇನ್ನು ಹಲವರು ಕೂಡ ನಮ್ಮ ಪಕ್ಷ ಸೇರಲಿದ್ದಾರೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.