ETV Bharat / city

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡಿದರೆ ನನಗೇ ಕೊಡ್ಬೇಕು: ಶಾಸಕ ಎಸ್​​.ಎ ರವೀಂದ್ರನಾಥ್ - ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್​.ಎ ರವೀಂದ್ರನಾಥ್

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡಿದರೆ ನನಗೇ ಕೊಡಬೇಕು. ಮತ್ಯಾರಿಗೆ ಕೊಡಲು ಬರುತ್ತದೆ ಎಂದು ಶಾಸಕ ಎಸ್​.ಎ ರವೀಂದ್ರನಾಥ್ ಪ್ರಶ್ನಿಸಿದರು.

MLA SA Ravindranath
ಶಾಸಕ ಎಸ್​​.ಎ ರವೀಂದ್ರನಾಥ್
author img

By

Published : Jan 3, 2022, 1:34 PM IST

ದಾವಣಗೆರೆ: ಈಗಾಗಲೇ ಸಚಿವ ಸಂಪುಟ ಪುನರ್​ ರಚನೆ ಮಾಡುವ ಸುಳಿವು ಬಿಜೆಪಿ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಅದರಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ಸಾಲಿನಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್​.ಎ ರವೀಂದ್ರನಾಥ್ ಕೂಡ ಇದ್ದಾರಂತೆ.

ಸಚಿವ ಸ್ಥಾನದ ಬಗ್ಗೆ ಶಾಸಕ ಎಸ್​​.ಎ ರವೀಂದ್ರನಾಥ್ ಪ್ರತಿಕ್ರಿಯೆ

ನಗರದ ಮೋತಿ ವೀರಪ್ಪ ಕಾಲೇಜಿನ ಆವರಣದಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡಿದರೆ ನನಗೆ ಕೊಡಬೇಕು. ಮತ್ಯಾರಿಗೆ ಕೊಡಲು ಬರುತ್ತದೆ ಎಂದು (ಮಾಧ್ಯಮದವರನ್ನು) ಪ್ರಶ್ನಿಸಿದರು.

ನಾನು ಇಲ್ಲಿ ಮಕ್ಕಳಿಗೆ ವ್ಯಾಕ್ಸಿನೇಷನ್‌ ಮಾಡಿಸಲು ಬಂದಿದ್ದೇನೆ. ನನಗೆ ಸಚಿವ ಸ್ಥಾನ ಸಿಗಲಿ, ಸಿಗದೇ ಇರಲಿ ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ. ನನಗೆ ಸಚಿವ ಸ್ಥಾನ ಸಿಗದೇ ಇರುವಾಗಲೂ ನಾನು ಸಂತೋಷವಾಗಿರುತ್ತೇನೆ ಎಂದರು.

ಸಿಎಂ ಬದಲಾವಣೆಯಿಲ್ಲ:

ಸಿಎಂ ಬದಲಾವಣೆ ಸತ್ಯಕ್ಕೆ ದೂರವಾಗಿದ್ದು, ಯಾರು ಚಿಂತಿಸುವ ಅವಶ್ಯಕತೆ ಇಲ್ಲ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಪೂರ್ಣಾವಧಿ ವರೆಗೆ ಇರುತ್ತಾರೆ. ಸಿಎಂಗೆ ಆರೋಗ್ಯ ಸರಿ ಇಲ್ಲ ಅಂದ್ರೆ ಹೇಗೆ?. ನನಗೂ ಆರೋಗ್ಯ ಸರಿ ಇಲ್ಲ. ನಮ್ಮ ಆರೋಗ್ಯ ಸರಿ ಮಾಡಿಸಿಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಕೋವಿಡ್​​​​ ಹೆಚ್ಚಾದರೆ, ಜನರು ಸಹಕಾರ ಕೊಡದಿದ್ದರೆ ಲಾಕ್​ಡೌನ್​ ಅನಿವಾರ್ಯ: ಆರಗ ಜ್ಞಾನೇಂದ್ರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.