ETV Bharat / city

ಆರ್‌ಎಸ್‌ಎಸ್‌ ಮೂಲದವರನ್ನ ಸಚಿವ ಸ್ಥಾನದಿಂದ ಕೆಳಗಿಳಿಸುವುದಿಲ್ಲ.. ಸಚಿವ ಸುನೀಲ್ ಕುಮಾರ್ - ಕಾಂಗ್ರೆಸ್​ ವಿರುದ್ಧ ಸುನೀಲ್​ ಕುಮಾರ್​ ವಾಗ್ದಾಳಿ

ಪಕ್ಷ ನಮಗೆ ಕೊಟ್ಟಿದೆ ವಿನಃ ನಾವು ಪಕ್ಷಕ್ಕೆ ಏನೂ ಕೊಟ್ಟಿಲ್ಲ. ಪಕ್ಷದಲ್ಲಿ ವಿಚಾರಕ್ಕೆ ಆದ್ಯತೆ ವಿನಃ ಹಣಕ್ಕಲ್ಲ. ಶಾಸಕ ಯತ್ನಾಳ್ ಹಣ ಕೊಡುವ ಬಗ್ಗೆ ಯಾವ ಆ್ಯಂಗಲ್​ನಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಸಚಿವ ಸುನೀಲ್​ ಕುಮಾರ್​ ಹೇಳಿಕೆ ನೀಡಿದ್ದಾರೆ..

Minister Sunil Kumar
ಸಚಿವ ಸುನೀಲ್​ ಕುಮಾರ್​
author img

By

Published : May 14, 2022, 1:25 PM IST

ದಾವಣಗೆರೆ : ಕಾಂಗ್ರೆಸ್ ಪಕ್ಷ ನಾಯಕರಿಲ್ಲದ ಅನಾಥವಾದ ಕೋಣೆಯಾಗಿದೆ. ಅಲ್ಲಿ ಕಾರ್ಯಕರ್ತರು, ನಾಯಕರು ಎಲ್ರೂ ಅನಾಥರು. ಕಾಂಗ್ರೆಸ್ ನಾಯಕರೆಲ್ಲರೂ ಬೇಲ್ ಮೇಲೆ ಇದ್ದಾರೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕಾಂಗ್ರೆಸ್ ಪಕ್ಷದ‌ ವಿರುದ್ಧ‌ ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಇವತ್ತು ರಾಜ್ಯದ ಜನರಿಗೆ ಭರವಸೆ ಇದ್ದರೆ ಅದು ಬಿಜೆಪಿ ಹಾಗೂ‌ ಮೋದಿಯವರ ಮೇಲೆ ಮಾತ್ರ ಎಂದಿದ್ದಾರೆ. ಕಾಂಗ್ರೆಸ್​ನವರು ಹತ್ತು ಸುಳ್ಳು ಹೇಳಿ ನಿಜ ಮಾಡಲು ಹೋಗುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರಿಗಳು ಜಾಮೀನಿನ ಮೇಲೆ ಇದ್ದವರು. ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು, ರಾಜ್ಯ ಅಧ್ಯಕ್ಷರವರೆಗೂ ಬೇಲ್ ಮೇಲೆ ಇದ್ದಾರೆ.

ಅವರು ನಮ್ಮ ಮೇಲೆ ಅರೋಪ ಮಾಡುತ್ತಾರೆ ಎಂದರೆ ನೀವೇ ಯೋಚಿಸಿ. ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಒಳಿತಾಗುವ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ನಾಯಕರು, ದೂರದೃಷ್ಟಿ ಇಟ್ಟುಕೊಂಡ ಯಾವ ಸಮಯಕ್ಕೆ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಿದೆ ಎಂದರು.

ಸಚಿವ ಸ್ಥಾನದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಸುನೀಲ್​ ಕುಮಾರ್..​

ಆರ್​ಎಸ್ಎಸ್ ಮೂಲದವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವುದಿಲ್ಲ‌: ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದವನು, ಪಕ್ಷ ಹಾಗt ಕಾರ್ಯಕರ್ತರು ನನ್ನನ್ನು ಚುನಾವಣೆಗೆ ನಿಲ್ಲಿಸಿ ಸಚಿವರನ್ನಾಗಿ ಮಾಡಿದ್ದಾರೆ. ಮುಂದೆ ಕೂಡ ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಬದ್ಧರಿದ್ದೇವೆ. ಇದರಲ್ಲಿ ಬೇರೆ ಬೇರೆ ವಿಚಾರ ಪ್ರಸ್ತಾಪ ಇಲ್ಲ.

ಸಚಿವ ಸ್ಥಾನಕ್ಕೆ 60, 100 ಕೋಟಿ ನೀಡುತ್ತಿದ್ದಾರೆ ಎನ್ನುವ ಹೇಳಿಕೆ ಹಿನ್ನೆೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪಕ್ಷ ನಮಗೆ ಕೊಟ್ಟಿದೆ ವಿನಃ ನಾವು ಪಕ್ಷಕ್ಕೆ ಏನೂ ಕೊಟ್ಟಿಲ್ಲ. ಪಕ್ಷದಲ್ಲಿ ವಿಚಾರಕ್ಕೆ ಆದ್ಯತೆ ವಿನಃ ಹಣಕ್ಕಲ್ಲ. ಶಾಸಕ ಯತ್ನಾಳ್ ಹಣ ಕೊಡುವ ಬಗ್ಗೆ ಯಾವ ಆ್ಯಂಗಲ್​ನಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಹೇಳಿದ್ದಾರೆ ಎಂದರೆ ಅದು ಸಾರ್ವತ್ರಿಕ ಆಗಲ್ಲ. ಬೊಮ್ಮಾಯಿ ನೇತೃತ್ವದಲ್ಲಿ ನಾವು ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರಂತರ ಜ್ಯೋತಿ ಅಕ್ರಮ ಪ್ರಕರಣ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಂತ ನಿರಂತರ ಜ್ಯೋತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪೀಢರ್​ಗಳಲ್ಲಿ ತನಿಖೆ ನಡೆಸಿದ್ದೇವೆ, ಅದು ಸಮಾಧಾನ ತಂದಿಲ್ಲ. ಉಳಿದ 29 ಪೀಡರ್​ಗಳ ತನಿಖೆ ಮಾಡುವುದಕ್ಕೆ ಆದೇಶಿಸಿದ್ದೇನೆ. ನಿರಂತರ ಜ್ಯೋತಿ ಅಕ್ರಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ನಾನು ಇಲಾಖೆ ಸಚಿವನಾದ ಮೇಲೆ 100ಕ್ಕೂ ಅಧಿಕ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇನೆ. ಅದೇ ರೀತಿ ಹರಿಹರದಲ್ಲಿ ಸಮಗ್ರ ತನಿಖೆ ಮಾಡಿಸಿ ಕ್ರಮಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ರಾಜಕಾರಣದಲ್ಲಿ ದಿನಗಣನೆ ಮಾಡಲು ಆಗುವುದಿಲ್ಲ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.