ETV Bharat / city

ದಿವ್ಯಾ ಹಾಗರಗಿಗೂ ಬಿಜೆಪಿಗೂ ಸಂಬಂಧವಿಲ್ಲ: ಸಚಿವ ಆರ್ ಅಶೋಕ್ - dingaleshwara swamy commission statement

ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದರೆ ಸಾಬೀತು ಮಾಡಲಿ. ಯಾರಾದರೂ ಪಿಎಸ್ಐ ಅಭ್ಯರ್ಥಿ ಸರ್ಕಾರಕ್ಕೆ ಹಣ ಕೊಟ್ಟಿದ್ದಾರಾ ಎಂದು ಹೇಳಲಿ ಎಂದರು. ಕಾಂಗ್ರೆಸ್​ನಲ್ಲಿ ಕಚ್ಚಾಟಗಳು, ಗೊಂದಲಗಳು ಇವೆ. ತಾನು ಸಿಎಂ ಆಗಬೇಕು ಎಂದು ಎಲ್ಲ ನಾಯಕರು ಕಚ್ಚಾಟ ನಡೆಸುತ್ತಿದ್ದಾರೆ..

minister r ashok and Byrati Basavaraj speaks on Karnataka issues
ಸಚಿವ ಆರ್ ಅಶೋಕ್, ಭೈರತಿ ಬಸವರಾಜ್ ಮಾತನಾಡಿರುವುದು
author img

By

Published : Apr 19, 2022, 1:14 PM IST

Updated : Apr 19, 2022, 2:18 PM IST

ದಾವಣಗೆರೆ : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ದಿವ್ಯಾ ಹಾಗರಗಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಲ್ಲಿನ ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆಂದು ಸಚಿವ ಆರ್ ಅಶೋಕ್ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ದಿವ್ಯಾ ಹಾಗರಗಿ ಅವರು ನಮ್ಮ ಪಕ್ಷದ ಕಾರ್ಯಕರ್ತೆ ಅಲ್ಲ ಎಂದು ನಮ್ಮ ಬಿಜೆಪಿ ಜಿಲ್ಲಾಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷದ ಸದಸ್ಯರಾಗಬೇಕೆಂದರೆ ಸಾಕಷ್ಟು ನಿಯಮಗಳಿವೆ. ಅವರು ನಮ್ಮ ಪಕ್ಷದ ಸದಸ್ಯರಲ್ಲ ಎಂದರು.

ಈಶ್ವರಪ್ಪನವರು ಮೇಲ್ನೋಟಕ್ಕೆ ತಪ್ಪಿತಸ್ಥರು. ಸಂತೋಷ್ ಪಾಟೀಲ್ ಮೊದಲು ಕಾಂಗ್ರೆಸ್​ನಲ್ಲಿದ್ದವರು ಎಂಬ ಬಗ್ಗೆ ಮಾಹಿತಿಯಿದೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಜಾಸ್ತಿ ಮಾತನಾಡುವುದಕ್ಕೆ ಆಗುವುದಿಲ್ಲ ಎಂದರು.

ಸಚಿವ ಆರ್ ಅಶೋಕ್, ಭೈರತಿ ಬಸವರಾಜ್ ಮಾತನಾಡಿರುವುದು......

ದಿಂಗಾಲೇಶ್ವರ ಶ್ರೀಯವರು ಕಮೀಷನ್ ಆರೋಪ ಮಾಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್​​ನವರು ಇದ್ದಾರೆ. ಓರ್ವ ಪೀಠಾಧಿಪತಿ ಈ ರೀತಿ ಹೇಳಿಕೆ ನೀಡುವುದು ಶೋಭೆ ತರುವಂಥದ್ದಲ್ಲ ಎಂದು ಸಚಿವ ಭೈರತಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಎಷ್ಟೊಂದು ಪೂಜ್ಯರಿದ್ದಾರೆ. ಆದ್ರೆ, ಅವರು ಯಾರೂ ಕೂಡ ಈ ರೀತಿಯ ಹೇಳಿಕೆ ನೀಡಿಲ್ಲ ಎಂದರು.

ಹುಬ್ಬಳ್ಳಿ ಗಲಭೆಗೆ ಕಾರಣರಾದವರ ವಿರುದ್ಧ ಕ್ರಮವಹಿಸಲಾಗಿದೆ. ಕಾಂಗ್ರೆಸ್ ಮುಖಂಡರು ಬಿಜೆಪಿ ಗಲಭೆ ಮಾಡಿಸುತ್ತಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸತ್ಯಾಸತ್ಯತೆ ಬಯಲಿಗೆ ಬರಲಿದೆ ಎಂದರು. ಇನ್ನೂ, ಪೊಲೀಸ್ ಕಾರುಗಳ ಮೇಲೆ ನಿಂತು ಗಲಾಟೆ ಮಾಡುವುದು, ವಾಹನಗಳನ್ನು ಜಖಂಗೊಳಿಸಿ ಸಾರ್ವಜನಿಕ ಆಸ್ತಿಪಾಸ್ತಿಯ ನಷ್ಟ ಮಾಡುವವರು ಅಮಾಯಕರೇ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರಲ್ಲ: ಬಿಎಸ್​ವೈ

ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದರೆ ಸಾಬೀತು ಮಾಡಲಿ. ಯಾರಾದರೂ ಪಿಎಸ್ಐ ಅಭ್ಯರ್ಥಿ ಸರ್ಕಾರಕ್ಕೆ ಹಣ ಕೊಟ್ಟಿದ್ದಾರಾ ಎಂದು ಹೇಳಲಿ ಎಂದರು. ಕಾಂಗ್ರೆಸ್​ನಲ್ಲಿ ಕಚ್ಚಾಟಗಳು, ಗೊಂದಲಗಳು ಇವೆ. ತಾನು ಸಿಎಂ ಆಗಬೇಕು ಎಂದು ಎಲ್ಲ ನಾಯಕರು ಕಚ್ಚಾಟ ನಡೆಸುತ್ತಿದ್ದಾರೆ.

ಹಾಗಾಗಿ, ಅವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದರು. ಇನ್ನೂ ಈಶ್ವರಪ್ಪ ವಿರುದ್ದ ಕಾಂಗ್ರೆಸ್ ಆರೋಪ ಮಾಡಿದ್ದು, ಸತ್ಯ ಬಯಲಿಗೆ ಬರಲಿದೆ. ನಮ್ಮ ಬಿಜೆಪಿ ಪಕ್ಷದ ಇಮೇಜ್ ಅನ್ನು ಕಡಿಮೆ ಮಾಡಲು ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆಂದರು.

Last Updated : Apr 19, 2022, 2:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.