ದಾವಣಗೆರೆ: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆ ಸಲುವಾಗಿ ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡುವುದು, ಸಂಪುಟದಿಂದ ಸಚಿವರನ್ನು ಕೈ ಬಿಡುವುದು ಸಿಎಂ ಅವರ ಪರಮಾಧಿಕಾರ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ದೆಹಲಿಗೆ ಹೋಗಿದ್ದಾರೆ. ಅವರು ಏನು ಸಂದೇಶ ಹೊತ್ತು ತರುತ್ತಾರೋ ಗೊತ್ತಿಲ್ಲ. ಅದ್ರೆ ಅವರ ತೀರ್ಮಾನಕ್ಕೆ ನಾವು ಬದ್ಧ. ಸಂಪುಟದಿಂದ ನಮ್ಮನ್ನು ಕೈಬಿಡುವುದಿಲ್ಲವೆನ್ನುವ ವಿಶ್ವಾಸವಿದೆ, ವಲಸೆ ಬಂದಿರುವವರೊಂದಿಗೂ ಅವರು ಆ ರೀತಿ ನಡೆದುಕೊಳ್ಳುವುದಿಲ್ಲ. ಇನ್ನೂ ಸಚಿವ ಸ್ಥಾನ ಹೋಗಲಿದೆ ಎಂದು ಆತಂಕ ಪಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸಚಿವ ಸ್ಥಾನ ಹಿಂಪಡೆದರೆ ಏನು ಮಾಡಲು ಸಾಧ್ಯ. ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡುವೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯನಗರ : ಪ್ರವಾಹವನ್ನು ಲೆಕ್ಕಿಸದೇ ಬಸ್ ಚಾಲನೆ
ಚನ್ನಗಿರಿ ತಾಲೂಕಿನ ಸಿದ್ದನ ಮಢ, ಮೆದಿಕೆರೆ ಗ್ರಾಮದ ಭಾಗದ ಜಮೀನನ್ನು ವೀಕ್ಷಿಸಿದರು. ಮಳೆ ಹಿನ್ನೆಲೆ ಅಪಾರ ಪ್ರಮಾಣದ ಭತ್ತ ನಾಳವಾಗಿದೆ. ವೀಕ್ಷಣೆ ಬಳಿಕ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಮಾವು ಬೆಳೆಗಾರರು ಕೂಡ ಮಳೆಯಿಂದ ನಷ್ಟ ಅನುಭವಿಸಿದ್ದು, ಪರಿಹಾರಕ್ಕೆ ರೈತರು ಸಚಿವರಲ್ಲಿ ಮನವಿ ಮಾಡಿದರು.